
ಹೊಸದಿಲ್ಲಿ: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಭರ್ಜರಿ ಗೆಲುವು ಕಾಣಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
‘ಇಂಡಿಯಾ ಟುಡೇ-ಅಕ್ಸಿಸ್ ಮೈ ಇಂಡಿಯಾ’ ಜನಾಭಿಪ್ರಾಯ ಸಂಗ್ರಹ ಸಮೀಕ್ಷೆ ಪ್ರಕಾರ, ಬಿಜೆಪಿ 48%ಮತಗಳನ್ನು ಪಡೆಯಲಿದ್ದು, ಕಾಂಗ್ರೆಸ್ 38% ಮತಗಳನ್ನು ಗಳಿಸಲಿದೆ.
ಜನಾಭಿಪ್ರಾಯ ಸಂಗ್ರಹದಲ್ಲಿ 34% ಮಂದಿ ಹಾಲಿ ಸಿಎಂ ವಿಜಯ್ ರೂಪಾನಿ ಅವರನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ನ ಶಕ್ತಿ ಸಿನ್ಹ ಗೋಹಿಲ್ ಅವರನ್ನು 19% ಮಂದಿ, ಭರತ್ ಸಿನ್ಹ ಸೋಲಂಕಿ ಅವರನ್ನು 11% ರಷ್ಟು ಮಂದಿ ಬೆಂಬಲಿಸಿದ್ದಾರೆ. ಶೇ 10ರಷ್ಟು ಜನರು ಅಮಿತ್ ಶಾ ಸಿಎಂ ಆಗಬೇಕು ಎಂದಿದ್ದಾರೆ.
ಶೇಕಡಾ 66ರಷ್ಟು ಜನರು ಮೋದಿ ಪ್ರಧಾನಿ ಆಗಿದ್ದರಿಂದ ಗುಜರಾತ್ಗೆ ಅನುಕೂಲವಾಗಿದೆ ಎಂದಿದ್ದಾರೆ. ಶೇ. 31ರಷ್ಟು ಮಂದಿ ಮೋದಿ ಪ್ರಧಾನಿಯಾಗುವುದರಿಂದ ರಾಜ್ಯಕ್ಕೆ ಪ್ರಯೋಜನವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮೀಕ್ಷೆಯ ಭವಿಷ್ಯ
ಒಟ್ಟು ಸ್ಥಾನಗಳು: 182
ಮ್ಯಾಜಿಕ್ ನಂಬರ್: 92
ಬಿಜೆಪಿ: 115-125
ಕಾಂಗ್ರೆಸ್: 57-65
ಇತರೆ: 0-3
ಇಂದು ಅಧಿಸೂಚನೆ?
ಬಹು ನಿರೀಕ್ಷಿತ ಗುಜರಾತ್ ಮತಸಮರದ ದಿನಾಂಕವನ್ನು ಚುನಾವಣಾ ಆಯೋಗ ಬುಧವಾರ ಪ್ರಕಟವಾಗುವ ಸಾಧ್ಯತೆಯಿದೆ. ಎರಡು ಹಂತದಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Comments are closed.