ರಾಷ್ಟ್ರೀಯ

ವಿಮಾನ ನಿಲ್ದಾಣ ಭದ್ರತೆಗೆ ಫೇಸ‌್‌ಬುಕ್, ಟ್ವಿಟರ್ ಮೇಲೆ ಕಣ್ಣು

Pinterest LinkedIn Tumblr


ಹೊಸದಿಲ್ಲಿ: ಜನರ ಭಾವನೆಗಳು, ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಸಾಮಾಜಿಕ ಜಾಲತಾಣಗಳ ಟ್ರೆಂಡಿಂಗ್ ಮೂಲಕ ಗುಪ್ತಚರ ಮಾಹಿತಿಗಳನ್ನು ಕಲೆ ಹಾಕಿ, ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಸಂಭವಿಸಬಹುದಾದ ಅನಾಹುತ ತಡೆಗೆ ಕ್ರಮ ಕೈಗೊಳ್ಳಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮುಂದಾಗಿದ್ದು, ಇದಕ್ಕಾಗಿಯೇ ಘಟಕವೊಂದನ್ನು ಸ್ಥಾಪಿಸುತ್ತಿದೆ.

ವಿಮಾನ ನಿಲ್ದಾಣ, ಅಂತರಿಕ್ಷ ಹಾಗೂ ಅಣು ಸ್ಥಾವರಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸಿಐಎಸ್‌ಎಫ್, ಇದೇ ಮೊದಲಿಗೆ ಸಾಮಾಜಿಕ ಜಾಲತಾಣಗಳ ಟ್ರೆಂಡಿಂಗ್‌ ಗಮನಿಸಲು ಮೀಡಿಯಾ ಲ್ಯಾಬನ್ನು ಸ್ಥಾಪಿಸಿದ್ದು, ಸಾಮಾಜಿಕ ಜಾಲತಾಣಗಳ ಆಗು ಹೋಗುಗಳ ಟ್ರೆಂಡ್ ಗಮನಿಸಿ, ಸಂಶೋಧನೆ ನಡೆಸಲು ಚೆನ್ನೈನ ಅರಕ್ಕೋಣಮ್‌ನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸುತ್ತಿದೆ.

ದೇಶದ ಆಸ್ತಿಗಳ ಮೇಲೆ ಶಂಕಿತ ಚಟುವಟಿಕೆಗಳನ್ನು ಗಮನಿಸಲು ಟ್ವೀಟರ್, ಫೇಸ್‌ಬುಕ್, ಯೂಟ್ಯೂಬ್ ಮತ್ತು ಫ್ಲಿಕರ್ ಚಟುವಟಿಕೆಗಳನ್ನು ಗಮನಿಸುವುದು ಈ ಕೇಂದ್ರದ ಮುಖ್ಯ ಜವಾಬ್ದಾರಿ. ಪ್ರಾಯೋಗಾತ್ಮಕವಾಗಿ ಈ ಕಾರ್ಯವನ್ನು ಸಿಐಎಸ್‌ಎಫ್ ಕೈಗೆತ್ತಿಕೊಳ್ಳುತ್ತಿದ್ದು, ದೇಶದ ಆಸ್ತಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಬದ್ಧವಾಗಿದೆ.

ಭದ್ರತಾ ವಿಷಯಗಳ ಮೇಲೆ ಕಣ್ಣಿಡುವ ಈ ಮೀಡಿಯಾ ಲ್ಯಾಬನ್ನು ದಿಲ್ಲಿಯ ಐಐಟಿ ಅಭಿವೃದ್ಧಿಪಡಿಸಿದ್ದು, ಗುಪ್ತಚರ ಇಲಾಖೆ ಹಾಗೂ ಮುಂಬಯಿ ಪೊಲೀಸರು ಕಣ್ಣಿಡಲಿದ್ದಾರೆ. ಅಕಸ್ಮಾತ್ ಈ ಯೋಜನೆ ಸೂಕ್ತವಾಗಿ ಕಾರ್ಯರೂಪಕ್ಕೆ ಬಂದಲ್ಲಿ, ಇದೀಗ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿರುವ ಕೇಂದ್ರವನ್ನು ದೇಶೆದೆಲ್ಲೆಡೆ ವಿಸ್ತರಿಸಲಾಗುತ್ತದೆ, ಎಂದು ಸಿಐಎಸ್‌ಎಫ್ ಮಹಾ ನಿರ್ದೇಶಕರಾದ ಒ.ಪಿ.ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

Comments are closed.