ರಾಷ್ಟ್ರೀಯ

ಕೇದಾರನಾಥದಲ್ಲಿ ಕಳೆದ ದಿನಗಳು,ಬಾಬಾರನ್ನು ನೆನಪಿಸಿದ ಮೋದಿ

Pinterest LinkedIn Tumblr


ಡೆಹರಾಡೂನ್‌ : ಪ್ರಧಾನಿ ನರೇಂದ್ರ ಮೋದಿ ದೀಪಾವಳಿಯ ಶುಭ ಸಂದರ್ಭದಲ್ಲಿ ಪುಣ್ಯಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಬಹಿರಂಗ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿ ‘ನಾನು ಇಲ್ಲಿ ಕೆಲ ವರ್ಷಗಳನ್ನು ಕಳೆದಿದ್ದೇನೆ.ಭೋಲೆ ಬಾಬಾ ಅವರ ಸೇವೆ ಮಾಡಿಕೊಂಡಿದ್ದೆ. ಅವರು ಆಶೀರ್ವದಿಸಿ ನನ್ನನ್ನು 125 ಕೋಟಿ ಜನರ ಸೇವೆಗೆ ಕಳುಹಿಸಿದರು’ಎಂದರು.

‘ಕೇದಾರನಾಥ ಪುಣ್ಯ ಕ್ಷೇತ್ರದ ಸರ್ವ ರೀತಿಯಲ್ಲಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೆಲಸಮಾಡುತ್ತಿದೆ. ಪ್ರತೀ ವರ್ಷ ಇಲ್ಲಿಗೆ 10 ಲಕ್ಷ ಮಂದಿ ಯಾತ್ರಿಗಳು ಬರಬೇಕು. ಅವರಿಗೆ ರಸ್ತೆ,ವಸತಿ ಜೊತೆಗೆ ಡಿಜಿಟಲೀಕರಣ ಮಾಡುವ ಮೂಲಕ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದು ನಮ್ಮ ಗುರಿ’ ಎಂದರು.

‘ಧಾರ್ಮಿಕ ಕ್ಷೇತ್ರ ಜೊತೆ ಜೊತೆಗೆ ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿ ಮಾಡುವ ಗುರಿ ನಮ್ಮ ಮುಂದಿದ್ದು ಇಲ್ಲಿನ ಮಂದಾಕಿನಿ ನದಿಯಲ್ಲಿ ಸಂಗೀತ ಕಾರಂಜಿ , ಘಾಟ್‌ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡುವ ನಿಟ್ಟಿಯಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.

-ಉದಯವಾಣಿ

Comments are closed.