ರಾಷ್ಟ್ರೀಯ

ತಮಿಳುನಾಡಲ್ಲಿ ಹೀಗೊಂದು ಮಾದರಿ ದೀಪಾವಳಿ!

Pinterest LinkedIn Tumblr


ಚೆನ್ನೈ: ದೇಶದ ಪಟಾಕಿ ರಾಜಧಾನಿ ಯೆಂದೇ ಖ್ಯಾತಿ ಪಡೆದಿರುವ ತಮಿಳು ನಾಡು ರಾಜ್ಯದ ಹಲವೆಡೆ ಈ ಬಾರಿಯ ದೀಪಾವಳಿಯ ವೇಳೆ ಪಟಾಕಿ ಶಬ್ದವನ್ನು ನಿಲ್ಲಿಸಲಾಗಿದೆ. ಈ ಪಟಾಕಿ “ಹಠಾವೊ’ ನಿರ್ಧಾರ ಸರಕಾರಿ ಆದೇಶದಿಂದ ಆಗಿದ್ದಲ್ಲ, ಜನರೇ ಸ್ವಯಂಪ್ರೇರಿತರಾಗಿ ಕೈಗೊಂಡ ನಿರ್ಧಾರ. ಹಾಗಾಗಿ, ಈ ಬಾರಿಯ ದೀಪಾವಳಿ ಈ ಪ್ರದೇಶಗಳಲ್ಲಿ ಮಾದರಿ ದೀಪಾವಳಿ ಎಂದೆನಿಸಿದೆ. ಈ ರೀತಿ ಪಟಾಕಿ ನಿಷೇಧ ಜಾರಿ ಗೊಂಡಿರುವುದು ತಿರುನಲ್ವೇನಿ ಜಿಲ್ಲೆಯ ಕೂಥಂಕೂಳಂ, ಸೇಲಂ ಜಿಲ್ಲೆ ಯ ವಾ ವಲ್‌ ತೊಪ್ಪು, ಪೆರಂಬೂರು, ಕಂಚೀ ಪುರಂನ ವಿಶಾರ್‌ ಎಂಬ ಹಳ್ಳಿಗಳಲ್ಲಿ.

ಕೂಥಂಕೂಳಂ ಹಳ್ಳಿಯ ಬಳಿ ಪಕ್ಷಿಧಾಮವಿದೆ. ಅಲ್ಲಿ ಸಾಧಾರಣವಾಗಿ ಸೆಪ್ಟಂಬರ್‌, ಅಕ್ಟೋಬರ್‌, ನವೆಂಬರ್‌ ಮಾಸಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಗಳಿಂದ ಬಿಳಿ ಪೆಲಿಕನ್‌ ಹಕ್ಕಿಗಳು ವಲಸೆ ಬರುತ್ತವೆ. ಇದಲ್ಲದೆ ಫ್ಲಾಮಿಂಗೋ, ಸ್ಪನ್‌ಬಿಲ್‌, ಪೇಂಟೆಡ್‌ ಸ್ಟಾರ್ಕ್‌, ಎಗ್ರೆಟ್‌, ಡಕ, ಟೆರ್ನ್ ಹಾಗೂ ಐಬಿಎಸ್‌ನಂಥ ಅಪರೂಪದ ಪಕ್ಷಿಗಳು ಈ ಪಕ್ಷಿಧಾಮದಲ್ಲಿವೆ. ಆ ಪಕ್ಷಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಹಳ್ಳಿಯ ಜನರೇ ಪಟಾಕಿ ಸಿಡಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ. ಯಾವುದೇ ಧಾರ್ಮಿಕ ಕಾರ್ಯ ಕ್ರಮಗಳಲ್ಲೂ ಧ್ವನಿವರ್ಧಕಗಳ ಬಳಸದಿರಲು ನಿರ್ಧರಿಸಲಾಗಿದೆ.

ಇದಲ್ಲದೆ, ವೇದಾಮುಗಮ್‌, ವೆಲ್ಲೂರ್‌, ಈರೋಡ್‌ಗಳಲ್ಲಿಯೂ ಪಟಾಕಿಗೆ ಸ್ವಯಂಪ್ರೇರಿತ ನಿಷೇಧ ಹೇರಲಾಗಿದೆ. ಆದರೆ, ಈ ಮೂರು ಹಳ್ಳಿಗಳ ವಿಶೇಷತೆಯೆಂದರೆ, ಇಲ್ಲಿ ಹೀಗೆ ಪಟಾಕಿ ನಿಷೇಧವಾಗುತ್ತಿರುವುದು ಸತತ 18ನೇ ದೀಪಾವಳಿಗೆ!

-ಉದಯವಾಣಿ

Comments are closed.