ರಾಷ್ಟ್ರೀಯ

ಅಜ್ಜಿಯನ್ನು ಪ್ರಧಾನಿ ತಾಯಿ ಎಂದ ಕಿರಣ್‌ ಬೇಡಿ ಎಡವಟ್ಟು

Pinterest LinkedIn Tumblr


ಹೊಸದಿಲ್ಲಿ: ಮಾಜಿ ಐಪಿಎಸ್‌ ಅಧಿಕಾರಿ ಪುದುಚೇರಿಯ ರಾಜ್ಯಪಾಲೆ ಕಿರಣ್‌ ಬೇಡಿ ದೀಪಾವಳಿ ಕುರಿತು ಅಜ್ಜಿಯೊಬ್ಬರು ನೃತ್ಯ ಮಾಡುವ ಟ್ವೀಟ್‌ ಮಾಡಿದ್ದು, ಆ ಅಜ್ಜಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಎಂದು ಹೇಳಿ ನೆಟ್ಟಿಗರ ಆಕ್ರೋಶಕ್ಕೆ ಸಿಲುಕಿ ಕ್ಷಮಾಪಣೆ ಕೇಳಿದ ಪ್ರಸಂಗ ನಡೆದಿದೆ.

ದೀಪಾವಳಿ ಹಬ್ಬದ ಕುರಿತು ವೀಡಿಯೋವೊಂದನ್ನು ಟ್ವೀಟ್‌ ಮಾಡಿರುವ ಬೇಡಿ, 97ರ ವಯಸ್ಸಿನಲ್ಲೂ ದೀಪಾವಳಿ ಸ್ಪಿರಿಟ್‌ ನೋಡಿ, ಇದು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ಮೋದಿ. ಇವರು ತಮ್ಮ ನಿವಾಸದಲ್ಲಿ ದೀಪಾವಳಿ ಆಚರಿಸಿಕೊಳ್ಳುತ್ತಿರುವುದು ಎಂದು ಹೇಳಿ ಇಶಾ ಫೌಂಡೇಶನ್‌ನ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್‌ ಅವರನ್ನೂ ಸಹ ಟ್ಯಾಗ್‌ ಮಾಡಿದ್ದಾರೆ.

ಈ ವೀಡಿಯೋ ಯೂಟ್ಯೂಬ್‌ನಲ್ಲಿ ಅ.3ರಂದು ಅಜ್ಜಿಯ ಗರ್ಬಾ ನೃತ್ಯ ಎಂಬ ಟ್ಯಾಗ್‌ಲೈನ್‌ನಡಿ ಪೋಸ್ಟ್‌ ಮಾಡಲಾಗಿತ್ತು. ಹೀಗಾಗಿ ಬೇಡಿಯವರ ಈ ಟ್ವೀಟ್‌ ಮೋದಿ ಬೆಂಬಲಿಗರೂ ಸೇರಿದಂತೆ ಹಲವಾರು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಬೇಡಿಯನ್ನು ಮೋದಿಯವರ ಓಲೈಸುವ ಕೆಲಸ ಮಾಡಬೇಡಿ ಎಂದಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ಬಳಿಕ ಬೇಡಿ ಕೂಡಾ ಕ್ಷಮೆಯಾಚಿಸಿ ಆ ಅಜ್ಜಿಯ ನೃತ್ಯಕ್ಕೆ ಭೇಷ್‌ ಎಂದಿದ್ದಾರೆ.

Comments are closed.