ರಾಷ್ಟ್ರೀಯ

ಕೋತಿಗಳ ಹಾವಳಿ: ಮಹಿಳೆ ಆತ್ಮಹತ್ಯೆ

Pinterest LinkedIn Tumblr


ವೆಲ್ಲಾರದಾ(ಫೆ.11): ಕೋತಿಗಳ ನಿರಂತರ ಹಾವಳಿಯಿಂದಾಗಿ ಬೇಸತ್ತ ಮಹಿಳೆಯೊಬ್ಬರು ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಕೇರಳದ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿಧವೆ ಪುಷ್ಪಲತಾ(52) ಎಂದು ಗುರುತಿಸಲಾಗಿದೆ. ಪುಷ್ಪಲತಾ ತಿರುವನಂತಪುರಂ ಜಿಲ್ಲೆಯ ವೆಲ್ಲಾರದಾದಲ್ಲಿ ಪುತ್ರ ಮತ್ತು ಪುತ್ರಿಯೊಂದಿಗೆ ದಿನಗೂಲಿ ಮಾಡಿ ಪುಟ್ಟ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು.
ಆದರೆ, ಅವರ ಮನೆಗೆ ಲಗ್ಗೆ ಇಡುತ್ತಿದ್ದ ಮಂಗಗಳು ಊಟವನ್ನು ಹೊತ್ತೊಯ್ಯುತ್ತಿದ್ದವು. ಅಲ್ಲದೆ, ಬಟ್ಟೆ-ಬರೆಗಳನ್ನು ಮತ್ತು ಪಕ್ಕದ ಜಮೀನಿನಲ್ಲಿನ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಇದರಿಂದ ರೋಸಿ ಹೋದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಹಾಗೂ ಗ್ರಾಮ ಪಂಚಾಯತ್’ಗೂ ದೂರ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

Comments are closed.