ರಾಷ್ಟ್ರೀಯ

ಸ್ವದೇಶಕ್ಕೆ ಮರಳಿದ ಸುಮಾರು 1 ಲಕ್ಷ ಮಂದಿ ಭಾರತೀಯರು 

Pinterest LinkedIn Tumblr


ಅಂತರ್ಯುದ್ಧಗಳು, ಪ್ರಕೃತಿ ವೈಫಲ್ಯಗಳ ಹಿನ್ನೆಲೆಯಲ್ಲಿ ನಲುಗುತ್ತಿದ್ದ ಭಾರತೀಯರನ್ನು ಮತ್ತೆ ನಮ್ಮ ದೇಶಕ್ಕೆ ಕರೆತಂದಿದ್ದೇವೆ ಎಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ. ಸುಮಾರು 95,665 ಮಂದಿ ಭಾರತೀಯರನ್ನು ಕರೆತರಲಾಗಿದೆ ಎಂದು ವಿವರ ನೀಡಿದೆ.

ಕಳೆದ ಎರಡು ವರ್ಷಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ತೊಂದರೆಗೆ ಒಳಗಾದವರನ್ನು ರಕ್ಷಿಸಿದ್ದೇವೆಮ್ದು ಸರಕಾರ ತಿಳಿಸಿದೆ. ಭಾರತೀಯರ ರಕ್ಷಣೆಗೆ ಸರಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಲಿದೆ. ವಿದೇಶದಲ್ಲಿರುವ ಭಾರತೀಯರು ಚೆನ್ನಾಗಿ ಜೀವನ ನಡೆಸಬೇಕೆಂದು ಕೋರಿಕೊಳ್ಳುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ ಸಿಂಗ್ ತಿಳಿಸಿದ್ದಾರೆ.

ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟುನಿಂದ ಅನೇಕ ಭಾರತೀಯರು ಕೆಲಸ ಕಳೆದುಕೊಳ್ಳಬೇಕಾಯಿತು. ಭಾರತೀಯ ಮಿಷನ್ ಮತ್ತು ಪೋಸ್ಟ್ಸ್ ಬಳಿ ಇರುವ ಮಾಹಿತಿ 1,23,098 ಭಾರತೀಯರು ಸರಕಾರದ ಸಹಾಯ ಕೋರಿದ್ದರೆಂದು ಅವರಲ್ಲಿ 96,665 ಮಂದಿ ವಿದೇಶದಲ್ಲಿದ್ದವರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ವಿವರ ನೀಡಿದ್ದಾರೆ.

Comments are closed.