ರಾಷ್ಟ್ರೀಯ

ಜೆನ್ ಮೊಬೈಲ್‍ನಿಂದ ಮತ್ತೊಂದು ಜೆನ್ ಸಿನಿಮ್ಯಾಕ್ಸ್ 4ಜಿ ಹೆಸರಿನ  ಬಜೆಟ್ ಫೋನ್

Pinterest LinkedIn Tumblr

ಜೆನ್ ಮೊಬೈಲ್ಸ್ ಕಂಪೆನಿ ಭಾರತದಲ್ಲಿ ಇನ್ನೊಂದು ಬಜೆಟ್ ಫೋನ್ ಬಿಡುಗಡೆ ಮಾಡಿದೆ. ಜೆನ್ ಸಿನಿಮ್ಯಾಕ್ಸ್ 4ಜಿ ಹೆಸರಿನ ಈ ಫೋನ್ ಬೆಲೆ ರೂ.6,190. ಇದರಲ್ಲಿ 4ಜಿ ಸದುಪಾಯವುಳ್ಳ ಈ ಫೋನ್‍ನಲ್ಲಿ ಜಿಯೋ ಸಿಮ್ ಕೆಲಸ ಮಾಡುತ್ತದೆ.

ಕ್ಲಿಕ್ ಮಾದರಿಯ ಈ ಜೆನ್ ಸಿನಿಮ್ಯಾಕ್ಸ್‌ನಲಿ ಜಿಯೋ ಹ್ಯಾಪಿ ನ್ಯೂಇಯರ್ ಆಫರ್ ಬಳಸಿಕೊಳ್ಳಬಹುದು. ಗುರುವಾರದಿಂದ ಮಾರುಕಟ್ಟೆಯಲ್ಲಿ (ಆನ್‍ಲೈನ್ ಮತ್ತು ಆಫ್‍ಲೈನ್) ಲಭ್ಯವಾಗಲಿದೆ. ಶಾಂಪೇನ್ ಮತ್ತು ರೋಸ್‍ಗೋಲ್ಡ್ ಬಣ್ಣಗಳಲ್ಲಿ ಲಭ್ಯ.

ಜೆನ್ ಸಿನಿಮ್ಯಾಕ್ಸ್ 4ಜಿ ವಿಶೇಷಗಳು
* 5.5 ಇಂಚಿನ ಸ್ಪರ್ಶಸಂವೇದಿ ಪರದೆ
* ಕ್ವಾಡ್‍ಕೋರ್ ಪ್ರೋಸೆಸರ್
* 2 ಜಿಬಿ ರ್‍ಯಾಮ್
* 16 ಜಿಬಿ ಇಂಟರ್‌ನಲ್ ಮೆಮೊರಿ
* 5 ಎಂಪಿ ಹಿಂಬದಿ ಕ್ಯಾಮೆರಾ
* 5 ಎಂಪಿ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 6.0
* ಡ್ಯುಯಲ್ ಸಿಮ್
* 2900 ಎಂಎಎಚ್ ಬ್ಯಾಟರಿ ಸಾಮರ್ಥ್ಯ

Comments are closed.