ರಾಷ್ಟ್ರೀಯ

ಲೆನೊವೋ ಮೋಟೋದಿಂದ ಗ್ರೇ ಮೋಟೋ ಎಂ ಫೋನ್ ಬಿಡುಗಡೆ

Pinterest LinkedIn Tumblr


ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪೆನಿ ಲೆನೊವೋ ಮೋಟೋ ಎಂ ಸ್ಮಾರ್ಟ್‍ಫೋನ್ ಗ್ರೇ ಕಲರ್ ವೇರಿಯಂಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‍ಫೋನ್ ಮಾರಾಟ ಆನ್‍ಲೈನ್ ತಾಣ ಫ್ಲಿಫ್‍ಕಾರ್ಟ್‍ ಮೂಲಕ ನಡೆಯುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ಗೋಲ್ಡ್, ಸಿಲ್ವರ್ ಬಣ್ಣಗಳಲ್ಲಿ ಈ ಫೋನ್ ಮಾರುಕಟ್ಟೆ ಪ್ರವೇಶಿಸಿತ್ತು. ಕಂಪೆನಿಯ ಇದುವರೆಗಿನ ಫೋನ್‌ಗಳಿಗೆ ಹೋಲಿಸಿದರೆ ಇದಕ್ಕೊಂದು ವಿಶೇಷತೆ ಇದೆ. ಸಂಪೂರ್ಣ ಮೆಟಲ್ ಬಾಡಿಯಿಂದ ಕೂಡಿದ ಸ್ಮಾರ್ಟ್‍ಫೋನ್ ಇದು. ಬೆಲೆ ರೂ.15,999.

ಗ್ರೇ ಮೋಟೋ ಎಂ ಫೋನ್ ವಿಶೇಷಗಳು
*5.5 ಇಂಚಿನ ಸ್ಪರ್ಶಸಂವೇದಿ ಪರದೆ
* 8 ಮೆಗಾ ಪಿಕ್ಸೆಲ್ ಮುಂಬದಿ, 16 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 6.0.1 ಆಪರೇಟಿಂಗ್ ಸಿಸ್ಟಂ
* 4 ಜಿಬಿ ರ್ಯಾಮ್, 64 ಜಿಬಿ ಇಂಟರ್‌ನಲ್ ಮೆಮೊರಿ
* 3050 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

Comments are closed.