ಅಂತರಾಷ್ಟ್ರೀಯ

ಭಾರತೀಯರನ್ನು ಹೊರಹಾಕಬೇಕು ! ಅಮೆರಿಕದಲ್ಲಿ ವೈರಲ್ ಆಗ್ತಿದೆ ಲೆಟರ್ ಸುದ್ದಿ…

Pinterest LinkedIn Tumblr

ಹೂಸ್ಟನ್: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕದಲ್ಲಿ ಮತ್ತೆ ವರ್ಣಭೇದದ ಅಸಹ್ಯ ಮುಖ ತಲೆ ಎತ್ತುತ್ತಿದೆ ಎಂಬ ವದಂತಿಗೆ ಪುಷ್ಟಿ ನೀಡುವಂಥ ಸುದ್ದಿ ಕೇಳಿಬರುತ್ತಿದೆ. ಮುಸ್ಲಿಮರು, ಭಾರತೀಯರು ಮತ್ತು ಯಹೂದಿಗಳನ್ನು ಅಮೆರಿಕದಿಂದ ಹೊರಕಳುಹಿಸಬೇಕು ಎಂಬಂತಹ ಸಂದೇಶವಿರುವ ಪೋಸ್ಟರ್’ಗಳು ಜನರಿಗೆ ಶಾಕ್ ಕೊಟ್ಟಿವೆ. ದಕ್ಷಿಣ ಏಷ್ಯಾ ಮೂಲದ ಜನರು ಹೆಚ್ಚಾಗಿರುವ ಹೂಸ್ಟನ್’ನ ಫೋರ್ಟ್ ಬೆಂಡ್ ಎಂಬ ನಗರದಲ್ಲಿ ಇಂಥ ಪೋಸ್ಟರ್’ಗಳು ಹೆಚ್ಚೆಚ್ಚು ರಾರಾಜಿಸುತ್ತಿವೆ.

“ನಮ್ಮ ಹೊಸ ಅಧ್ಯಕ್ಷ ಡೊನಾಲ್ಡ್ ಜೆ.ಟ್ರಂಪ್ ಅವರು ಬಿಳಿ ರಾಷ್ಟ್ರಕ್ಕೆ ದೇವರು ನೀಡಿದ ಗಿಫ್ಟ್ ಆಗಿದ್ದಾರೆ. ಮುಸ್ಲಿಮರು, ಭಾರತೀಯರು ಮತ್ತು ಯಹೂದಿಗಳೇ, ನೀವು ಟೆಕ್ಸಾಸ್ ನಗರದಿಂದ ತೊಲಗಿ ನಿಮ್ಮ ನಾಡುಗಳಿಗೆ ಹೊರಟುಹೋಗಿ..” ಎಂದು ಪೋಸ್ಟರ್’ನಲ್ಲಿ ಬರೆಯಲಾಗಿದೆ.

ಇದನ್ನು ಕಂಡ ನಿವಾಸಿಗಳು ಪೊಲೀಸರಿಗೆ ದೂರು ನೀಡಲೂ ಹೆದರಿ ಸುಮ್ಮನಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್’ಗಳು ವ್ಯಾಪಕವಾಗಿ ಶೇರ್ ಆಗುತ್ತಿವೆ.

Comments are closed.