ರಾಷ್ಟ್ರೀಯ

ಫೇಸ್‍ಬುಕ್‍ನಲ್ಲಿ ವಿಧಾನಸಭೆಯ ಭಾಷಣ ಲೈವ್ ಮಾಡಿದ ಶಾಸಕ ಅಮಾನತು

Pinterest LinkedIn Tumblr


ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿನ ಭಾಷಣವನ್ನು ಫೇಸ್‍ಬುಕ್‍ನಲ್ಲಿ ಲೈವ್ ಮಾಡಿದ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಎಂಬವರನ್ನು ಸ್ಪೀಕರ್ ಹಿತೇಂದ್ರ ನಾಥ್ ಗೋಸ್ವಾಮಿ ಅಮಾನತು ಮಾಡಿದ್ದಾರೆ.

ಅಮಿನುಲ್ ಇಸ್ಲಾಂ ಅವರು ಶುಕ್ರವಾರ ಸದನ ಕಲಾಪ ನಡೆಯುವಾಗ ಭಾಷಣವನ್ನು ಫೇಸ್‍ಬುಕ್‍ನಲ್ಲಿ ಲೈವ್ ಮಾಡಿದ್ದಕ್ಕಾಗಿ ತಕ್ಷಣವೇ ಅವರು ಸದನದಿಂದ ಹೊರಹೋಗಬೇಕು. ಅವರನ್ನು ಫೆಬ್ರುವರಿ 8ರ ವರೆಗೆ ಅಮಾನತು ಮಾಡಲಾಗಿದೆ ಎಂದು ಗೋಸ್ವಾಮಿ ಆದೇಶಿಸಿದ್ದರು.

ಶುಕ್ರವಾರ ಸದನದಲ್ಲಿ ಮಧ್ಯಾಹ್ನ ಭೋಜನ ವಿರಾಮದ ನಂತರ ಕಲಾಪ ಆರಂಭವಾದಾಗ ಅಕ್ರಮ ವಲಸೆಗಾರರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿತ್ತು, ಈ ವೇಳೆ ಅಮಿನುಲ್ ಇಸ್ಲಾಂ ಫೇಸ್‍ಬುಕ್ ಲೈವ್ ಮಾಡಿದ್ದಾರೆ.

ಸ್ಪೀಕರ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅಮಿನುಲ್ ಅವರು, ನನ್ನಿಂದ ತಪ್ಪಾಗಿದೆ ನಿಜ. ಅದೇ ವೇಳೆ ವಿಧಾನಸಭಾ ಕಲಾಪವನ್ನು ನೇರ ಪ್ರಸಾರ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ನಾವು ಜನಪ್ರತಿನಿಧಿಗಳು ಇಲ್ಲಿ ಏನು ಮಾಡುತ್ತೇವೆ ಎಂಬುದು ಜನರಿಗೂ ತಿಳಿಯಲಿ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

Comments are closed.