ರಾಷ್ಟ್ರೀಯ

ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಗೆಲುವು: ರಾಹುಲ್

Pinterest LinkedIn Tumblr


ಲಕ್ನೋ(ಜ.29): ಉತ್ತರ ಪ್ರದೇಶದಲ್ಲಿ ಚುನಾವಣೆ ಕಾವು ತೀವ್ರಗೊಂಡಿದೆ. ದೇಶದಲ್ಲೇ ಬೃಹತ್ ಚುನಾವಣಾ ಅಖಾಡವಾಗಿರುವ ಉತ್ತರ ಪ್ರದೇಶದಲ್ಲಿ, ಇಂದು ರಾಹುಲ್ ಮತ್ತು ಅಖಿಲೇಶ್ ನೇತೃತ್ವದ ಜಂಟಿ ಸಭೆ, ಒಗ್ಗಟ್ಟಿನ ಪ್ರದರ್ಶನ ನಡೆಯಿತು.
ಲಕ್ನೋವಿನ ತಾಜ್ ಹೋಟೇಲ್’ನಲ್ಲಿ ಮಾತನಾಡಿದ ರಾಹುಲ್, ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಚುನಾವಣೆಯನ್ನು ಗೆಲ್ಲುತ್ತದೆ. ಗಂಗಾ ಯಮುನದ ಸಂಗಮದ ಹಾಗೆ, ಕಾಂಗ್ರೆಸ್ ಮತ್ತು ಎಸ್ಪಿ ಸಂಗಮವಾಗಿದೆ, ನಮ್ಮ ಮೈತ್ರಿಯು ಬಿಜೆಪಿಯ ಸೋಲಿಗೆ ಕಾರಣವಾಗುತ್ತೆ, ಎಂದಿದ್ದಾರೆ.
ಪ್ರಿಯಾಂಕ ಗಾಂಧಿ ಕಾಂಗ್ರೆಸ್’ನ ಬಹು ದೊಡ್ಡ ಆಸ್ತಿ ಎಂದ ರಾಹುಲ್, ಉಭಯ ನಾಯಕರು ಹಸನ್ಮುಖರಾಗಿ ಹೋರಾಟಕ್ಕೆ ಸಿದ್ಧ ಎಂದರು.
ಇನ್ನೂ ಇದೇ ವೇಳೆ ಮಾತನಾಡಿದ ಅಖಿಲೇಶ್, ಇದು ಕೇವಲ ನಮ್ಮ ಮೈತ್ರಿಯಲ್ಲ, ನಮ್ಮ ಜನತೆಯ ಮೈತ್ರಿ. ನಾನು ಮತ್ತು ರಾಹುಲ್ ಸೈಕಲ್’ನ ಎರಡು ಗಾಲಿಗಳಂತೆ. ಅಷ್ಟೇ ಅಲ್ಲದೇ ಉಭಯ ಪಕ್ಷಗಳು ಇನ್ನೂ 14 ಜಂಟಿ ರ್ಯಾಲಿ ನಡೆಸಲಿವೆಯೆಂದು ತಿಳಿಸಿದರು.
ಇನ್ನೂ ನೋಟ್ ಬ್ಯಾನ್ ಬಗ್ಗೆ ಮಾತನಾಡಿದ ಅಖಿಲೇಶ್, ಮೋದಿ ನೋಟ್ ಬ್ಯಾನ್’ನಲ್ಲಿ ಸೋತಿದ್ದಾರೆ. ಅಚ್ಛೆದಿನದ ನಿರೀಕ್ಷೆಯಲ್ಲಿದ್ದ ಜನತೆ ಸೋತಿದ್ದಾರೆ ಎಂದಿದ್ದಾರೆ.

Comments are closed.