ರಾಷ್ಟ್ರೀಯ

ಸುನಂದಾ ಸಾವಿನ ನಿಖರ ಕಾರಣ ಪತ್ತೆಯಾಗಿಲ್ಲ: ವೈದ್ಯಕೀಯ ಮಂಡಳಿ

Pinterest LinkedIn Tumblr


ನವದೆಹಲಿ: ಸುನಂದಾ ಪುಷ್ಕರ್‌ ಸಾವಿನ ಪ್ರಕರಣದ ನಿಖರ ಕಾರಣ ಇಂಥದ್ದೇ ಎಂದು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ವೈದ್ಯಕೀಯ ಮಂಡಳಿ ಹೇಳಿದೆ.

ಕಾಂಗ್ರೆಸ್‌ ಮುಖಂಡ ಶಶಿತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಅವರ ಸಾವಿನ ಕುರಿತಾಗಿ ಅಮೆರಿಕದ ಎಫ್‌ಬಿಐ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಏಮ್ಸ್‌) ನೀಡಿರುವ ವೈದ್ಯಕೀಯ ಪುರಾವೆಗಳನ್ನು ಮರು ಪರಿಶೀಲನೆಗೆ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು.

ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ವೈದ್ಯಕೀಯ ಮಂಡಳಿಯು ವರದಿಯನ್ನು ಸಲ್ಲಿಸಿದ್ದು, ಎಫ್‌ಬಿಐ ಹಾಗೂ ಏಮ್ಸ್‌ನ ಪುರಾವೆಗಳ ಅಧ್ಯಯನ ಬಳಿಕವೂ ಸಾವಿನ ನಿಖರ ಕಾಣರ ಇಂಥದ್ದೇ ಎಂದು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ, ಅನಿಶ್ಚಿತವಾಗಿಯೇ ಇದೆ ಎಂದು ವರದಿಯಲ್ಲಿ ಹೇಳಿದೆ.

ವೈದ್ಯಕೀಯ ಮಂಡಳಿ ತಿಂಗಳ ಹಿಂದೆ ತನ್ನ ವರದಿಯನ್ನು ಸಲ್ಲಿಸಿದ್ದು, ಸಾವಿನ ಕುರಿತು ನಿಖರ ಕಾರಣಗಳನ್ನು ತಿಳಿಸಿಲ್ಲ. ಎಫ್‌ಬಿಐ ಮತ್ತು ಏಮ್ಸ್‌ ಸಾಕ್ಷ್ಯಗಳನ್ನು ಪುನರ್‌ ಅಧ್ಯಯನ ಮಾಡಿ ಅಂತಿಮ ನಿರ್ಧಾರ ತಿಳಿಸಿ ಎಂದು ಹೇಳಿದ್ದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.