ರಾಷ್ಟ್ರೀಯ

ಸೈನಿಕರೊಂದಿಗೆ ನೇರ ಸಂಪರ್ಕಕ್ಕೆ ಹೊಸ ತಂತ್ರ

Pinterest LinkedIn Tumblr


ನವದೆಹಲಿ(ಜ.27): ಸೈನಿಕರ ಸಮಸ್ಯೆಗಳ ಬಗ್ಗೆ ಹೊರಬಂದ ವಿವಿಧ ವಿಡಿಯೋಗಳನ್ನು ಗಂಭಿರವಾಗಿ ಪರಿಗಣಿಸಿರುವ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೈನಿಕರೊಂದಿಗೆ ನೇರ ಸಂಪರ್ಕಕ್ಕೆ ಮುಂದಾಗಿದ್ದಾರೆ.
ಈ ಮೊದಲು ಬಿಎಸ್ಎಫ್ ಯೋಧ ತೇಜ್ ಬಹುದ್ದೂರ್ ತಮಗೆ ದೊರೆಯುತ್ತಿದ್ದ ಕಳಪೆ ಆಹಾರದ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಇದಾದ ಬೆನ್ನಲ್ಲೇ ಸಿಆರ್’ಪಿಎಫ್ ಯೋಧ ಜೀತ್ ಸಿಂಗ್ ಸೈನ್ಯದ ಸಮಸ್ಯೆಯನ್ನು ವಿಡಿಯೋ ಮೂಲಕ ತೋಡಿಕೊಂಡಿದ್ದರು. ಇದು ಸರ್ಕಾರದ ಮುಜುಗರಕ್ಕೂ ಕಾರಣವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಜನರಲ್ ಬಿಪಿನ್ ರಾವತ್, ಸೈನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ವಾಟ್ಸ್’ಆ್ಯಪ್ ಮೂಲಕ ದೂರು ದಾಖಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

Comments are closed.