ರಾಷ್ಟ್ರೀಯ

ಮತ್ತೊಂದು ಹೋರಾಟಕ್ಕೆ ಸಿದ್ದರಾದ ತಮಿಳರು

Pinterest LinkedIn Tumblr


ಚೆನ್ನೈ(ಜ.26): ಜಲ್ಲಿಕಟ್ಟು ಪ್ರತಿಭಟನೆ ಯಶಸ್ವಿ​ಯಾದ ಬೆನ್ನಲ್ಲೇ ಇದೀಗ ಪೆಪ್ಸಿ, ಕೋಕಾ-​ಕೋಲಾದ ವಿರುದ್ಧ ತಮಿಳಿಗರು ಬಂಡೆ​ದ್ದಿ​ದ್ದಾರೆ. ಹೀಗಾಗಿ, ಮಾಚ್‌ರ್‍ 1ರಿಂದ ತಮಿಳುನಾಡಿನಲ್ಲಿ ಪೆಪ್ಸಿ, ಕೋಕಾ​-​ಕೋಲಾದ ಆಟ ಮುಗಿಯಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಮಾ.1ರ ನಂತರ ಈ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ತನ್ನ ಸದಸ್ಯರಿಗೆ ತಮಿಳುನಾಡು ವಣಿಗರ್‌ ಸಂಗಂ ಮತ್ತು ತಮಿಳುನಾಡು ವ್ಯಾಪಾರಿ​ಗಳ ಒಕ್ಕೂಟ ಆದೇಶಿಸಿದೆ. ‘‘ನಮ್ಮ ಸಂಘಟನೆಯಲ್ಲಿ 15 ಲಕ್ಷ ಸದಸ್ಯ​ರಿದ್ದು, ನಾವು ಅವರಿಗೆ ಪೆಪ್ಸಿ, ಕೋಲಾ ಮಾರದಂತೆ ಸೂಚಿಸಿದ್ದೇವೆ,” ಎಂದು ವಣಿಗರ್‌ ಸಂಘದ ಅಧ್ಯಕ್ಷ ವಿಕ್ರಂ ರಾಜಾ ತಿಳಿಸಿದ್ದಾರೆ. ರೈತರು ಬರದಿಂದ ಕಂಗೆಟ್ಟಿರುವಾಗ, ಈ ಕಂಪನಿಗಳು ತಮ್ಮ ಉತ್ಪನ್ನಗಳಿಗಾಗಿ ರಾಜ್ಯದ ಜಲಮೂಲ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬುದು ಸಂಘಟನೆಗಳ ಆರೋಪ.

Comments are closed.