ರಾಷ್ಟ್ರೀಯ

ಪ್ರಿಯಾಂಕಾ ಹೇಳಿಕೊಳ್ಳುವಷ್ಟು ಸುಂದರಿಯೇನಲ್ಲ: ವಿನಯ್ ಕಟಿಯಾರ್

Pinterest LinkedIn Tumblr


ಲಖನೌ: ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಅವರನ್ನು ಸ್ಟಾರ್ ಪ್ರಚಾರಕಿಯಾಗಿ ಬಳಸಿಕೊಳ್ಳುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ
ಬಿಜೆಪಿ ಸಂಸದ, ಬಜರಂಗ ದಳದ ಅಧ್ಯಕ್ಷ ವಿನಯ್ ಕಟಿಯಾರ್ ಕೇವಲ ಸೌಂದರ್ಯದಿಂದ ಏನೂ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಪ್ರಿಯಾಂಕಾ ಗಾಂಧಿ ಸೌಂದರ್ಯದಿಂದ ಚುನಾವಣೆಯಲ್ಲಿ ಏನೂ ಪರಿಣಾಮ ಆಗಲ್ಲ, ಎನ್ನುವುದರ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಿಯಾಂಕಾ ಹೇಳಿಕೊಳ್ಳುವಷ್ಟೇನು ಸುಂದರಿಯಲ್ಲ. ಅವರಿಗಿಂತ ಹೆಚ್ಚಿನ ಸೌಂದರ್ಯವತಿ ಪ್ರಚಾರಕರು ನಮ್ಮಲ್ಲಿದ್ದಾರೆ. ಸಿನಿಮಾ ನಟರು, ಕಲಾವಿದರು ಸೌಂದರ್ಯದಲ್ಲೇನೂ ಕಡಿಮೆ ಇಲ್ಲ, ಎಂದು ಹೇಳಿದ್ದಾರೆ.

ಕಟಿಯಾರ್ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ, ಮಹಿಳೆಯರು ಸ್ವಂತ ಶ್ರಮದಿಂದ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಟಿಯಾರ್ ಅವರ ಈ ಹೇಳಿಕೆಯಿಂದ ಭಾರತದ ಮಹಿಳೆಯರ ಬಗ್ಗೆ ಬಿಜೆಪಿ ಮನಸ್ಥಿತಿ ಬಯಲಾಗಿದೆ ಎಂದು ಹೇಳಿದ್ದಾರೆ.

Comments are closed.