ರಾಷ್ಟ್ರೀಯ

ನೋಟು ನಿಷೇಧವನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ: ಮಮತಾ

Pinterest LinkedIn Tumblr


ಸುಕ್ನ (ಪಶ್ಚಿಮ ಬಂಗಾಳ): ಕೇಂದ್ರ ಸರ್ಕಾರದ ನೋಟು ರದ್ಧತಿ ಕ್ರಮವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಗದು ಪಡೆಯುವಿಕೆ ಮೇಲಿನ ನಿರ್ಬಂಧಗಳನ್ನು ಕೂಡಲೇ ತೆಗೆದು ಹಾಕುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ದೇಶ ಸ್ವಾತಂತ್ರ್ಯ ಪಡೆದು ಹಲವು ವರ್ಷಗಳಾಗಿದ್ದರೂ ಕೇಂದ್ರ ಸರ್ಕಾರ ಜನತೆಯನ್ನು ಅವಲಂಬಿತರನ್ನಾಗಿ ಮಾಡಿದೆ. ಆರ್ಥಿಕ ಹಕ್ಕುಗಳಿಲ್ಲದೇ ಪ್ರಜಾಪ್ರಭುತ್ವ ಮತ್ತು ರಾಜಕೀಯ ಹಕ್ಕುಗಳು ನಿರರ್ಥಕ’ ಎಂದಿದ್ದಾರೆ.

ನೋಟು ರದ್ಧತಿ ಸಂಬಂಧ ಇತರೆ ಪಕ್ಷಗಳು ಧನಿ ಎತ್ತದಿದ್ದರೂ, ತೃಣಮೂಲ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ನಡೆಸುತ್ತಲೇ ಇರುತ್ತದೆ.

ಕೇಂದ್ರ ಸರ್ಕಾರ ನೋಟು ರದ್ಧತಿ ಕ್ರಮದಿಂದ ಜನ ಸಾಮಾನ್ಯರ ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ. ಬ್ಯಾಂಕ್‌ಗಳಲ್ಲಿ ಇಂದಿಗೂ ನಗದು ಕೊರತೆ ಮುಂದುವರಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Comments are closed.