ಕೊಲ್ಕೊತಾ: ತನ್ನ ತಂದೆ ಜಮದಗ್ನಿಯ ಆದೇಶದಂತೆ ತನ್ನ ಕೊಡಲಿಯಿಂದ ತಾಯಿಯ ತಲೆ ಕಡಿದ ಪರಶುರಾಮನ ಬಗ್ಗೆ ಹಿಂದೂ ಪುರಾಣಗಳಲ್ಲಿ ಕೇಳಿದ್ದೇವೆ.
ಆದರೆ ಇಲ್ಲೊಬ್ಬ ಕಲಿಯುಗ ಪರಶುರಾಮ ಡ್ರಗ್ಸ್ ಗಾಗಿ ತಾಯಿ ಹಣ ನೀಡಲಿಲ್ಲವೆಂದು ಸುತ್ತಿಗೆಯಿಂದ ಹೊಡೆದು ಕೊಂದಿದ್ದ. 2015 ರಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಬರಾಸತ್ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಕೊಲ್ಕೋತಾ ವಿಭಾಗದ ಮಾಜಿ ಫುಟ್ ಬಾಲ್ ಆಟಗಾರ ಮಿಥುನ್ ಮಜುಂಮ್ದಾರ್ ತನ್ನ ತಾಯಿ ಡ್ರಗ್ಸ್ ಗಾಗಿ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಜೊತೆಗೆ ಆಕೆಯ ರಕ್ತದಲ್ಲಿ ತಾನು ಹೋಳಿ ಆಡಿದ್ದಾಗಿ ತನ್ನ ತಂದೆಗೆ ಹೇಳಿದ್ದ. ಮಿಥುನ್ ತಂದೆ ಸೇರಿದಂತೆ 11 ಮಂದಿ ಸಾಕ್ಷಿಗಳು ನೀಡಿದ್ದ ಹೇಳಿಕೆ ಅನ್ವಯ,ಬರಾಸತ್ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ, ಅಪರಾಧಿಗೆ ಮರಣದಂಡನೆ ಶಿಕ್ಷೆ ಸೂಕ್ತ, ಆದರೆ ಆತನಿಗೆ ಇನ್ನೂ ಚಿಕ್ಕ ವಯಸ್ಸು ಆದ್ದರಿಂದ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ಕೋರ್ಟ್ ಹೇಳಿದೆ.
ಉದ್ಯಮಿ ಅಮರ್ ಮಜುಮ್ದಾರ್ ಅವರಿಗೆ ಮಿಥುನ್ ಒಬ್ಬನೆ ಮಗ. ಓದಿನಲ್ಲಿ ಮುಂದಿದ್ದ ಮಿಥುನ್ ವೃತ್ತಿಪರ ಫುಟ್ ಬಾಲ್ ಆಟಗಾರನಾಗಿದ್ದ, ಆದರೆ ಮಾದಕವ್ಯಸನಿಯಾಗಿದ್ದ ಆತ 2015 ರ ಮಾರ್ಚ್ 1 ರಂದು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ತಾಯಿಯನ್ನೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದ. ಮಿಥುನ್ ತಂದೆಯ ಹೇಳಿಕೆ ಆಧಾರದ ಮೇಲೆ ಆತನನ್ನು ಬಂಧಿಸಿದ್ದ ಕೊಲ್ಕೋತ್ತಾ ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿದ್ದರು.
ರಾಷ್ಟ್ರೀಯ
Comments are closed.