ನವದೆಹಲಿ: ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಬರಾಕ್ ಒಬಾಮ ಕೆಳಗಿಳಿದು, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುವ ಈ ಹೊತ್ತಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ತಾಣದಲ್ಲಿ ಒಬಾಮ ನಂತರ ಅತೀ ಹೆಚ್ಚು ಹಿಂಬಾಲಕರಿರುವ ಪ್ರಭಾವಿ ನಾಯಕ ಎಂದೆನಿಸಿಕೊಂಡಿದ್ದಾರೆ.
ಸಾಮಾಜಿಕ ತಾಣಗಳಾದ ಟ್ವಿಟರ್, ಫೇಸ್‍ಬುಕ್, ಯೂಟ್ಯೂಬ್ ಮತ್ತು ಗೂಗಲ್ ಪ್ಲಸ್ ನಲ್ಲಿ ಮೋದಿಯವರಿಗೇ ಅತೀ ಹೆಚ್ಚು ಹಿಂಬಾಲಕರಿದ್ದಾರೆ.
2009ರಲ್ಲಿ ಟ್ವಿಟರ್ ಖಾತೆ ತೆರಿದಿದ್ದ ಪ್ರಧಾನಿ ಮೋದಿಯವರಿಗೆ ಇಲ್ಲಿ 2.65 ಕೋಟಿ ಹಿಂಬಾಲಕರಿದ್ದಾರೆ. ಅದೇ ವೇಳೆ ಫೇಸ್‍ಬುಕ್‍ನಲ್ಲಿ 3.92 ಕೋಟಿ ಹಿಂಬಾಲಕರಿದ್ದಾರೆ.
ಏತನ್ಮಧ್ಯೆ , ಒಬಾಮ ಅವರಿಗೆ 8.07 ಕೋಟಿ ಹಿಂಬಾಲಕರಿದ್ದು, ಮೋದಿಯವರಿಗಿಂತ ಹೆಚ್ಚು ಹಿಂಬಾಲಕರಿರುವ ಏಕೈಕ ರಾಜಕಾರಣಿಯಾಗಿದ್ದಾರೆ.
ಟ್ವೀಟ್‍ಗಳಿಂದಲೇ ಸದಾ ಸುದ್ದಿಯಲ್ಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿಯವರಿಗಿಂತ ಕಡಿಮೆ ಹಿಂಬಾಲಕರನ್ನು ಹೊಂದಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಮೋದಿಯವರ ಹಿಂಬಾಲಕರ ಸಂಖ್ಯೆ ಹೀಗಿದೆ
ಟ್ವಿಟರ್ : 26.5 ಮಿಲಿಯನ್
ಫೇಸ್‍ಬುಕ್ :39.2 ಮಿಲಿಯನ್
ಗೂಗಲ್ ಪ್ಲಸ್ : 3.2 ಮಿಲಿಯನ್
ಲಿಂಕ್ಡ್ ಇನ್ :1.99 ಮಿಲಿಯನ್
ಇನ್ಸ್ಟಾಗ್ರಾಂ :5.8 ಮಿಲಿಯನ್
ಯೂಟ್ಯೂಬ್ :5.91 ಲಕ್ಷ
Comments are closed.