ರಾಷ್ಟ್ರೀಯ

ಅಲ್ಲಿ ಹಣದ ವಹಿವಾಟು ಇಲ್ಲ; ವಸ್ತು ವಿನಮಯ

Pinterest LinkedIn Tumblr


ಗುವಾಹಟಿ: ಒಬ್ಬರುಲಾವಂಗ ಮೆಣಸು ನೀಡಿ ಪ್ರತಿಯಾಗಿ ಪುಟ್ಟ ಮೀನುಗಳನ್ನು ಪಡೆಯತ್ತಾರೆ. ಮಗದೊಬ್ಬರು ಶುಂಠಿ ನೀಡಿ ಪ್ರತಿಯಾಗಿ ಬೇರೊಂದು ತರಕಾರಿಯನ್ನೊ, ಮೀನನ್ನೋ ಪಡೆಯುತ್ತಾರೆ. ಕೋಳಿ ಕಾಳಗ ನಡೆಸಿ ಸಂತಸ ಪಡುತ್ತಾರೆ. ಜಲ್ಲಿಕಟ್ಟು ನಿಷೇಧದಂತ ಯಾವ ಅಡೆತಡೆಯೂ ಇಲ್ಲಿಲ್ಲ.

ಅಲ್ಲಿ ಹಣದ ವಹಿವಾಟು ಇಲ್ಲ; ವಸ್ತು ವಿನಮಯದ ಮೂಲಕ ಕೊಡು– ಕೊಳ್ಳುವಿಕೆ ನಡೆಯುತ್ತದೆ. –ಇದು ಈಶಾನ್ಯ ಭಾರತದ ಅಸ್ಸಾಂನ ರಾಜಧಾನಿ ಗುವಾಹಟಿಯಿಂದ 60 ಕಿ.ಮೀ. ದೂರದಲ್ಲಿರುವ ಮಾರಿಗಾವ್‌ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಗಳು ಆಚರಿಸತ್ತಾ ಬಂದಿರುವ ಜೊನ್‌ಬೆಲ್‌ ಮೇಳದ ಪರಂಪರೆ.

ಮೂರು ದಿನಕಾಲ ನಡೆಯುವ ಮೇಳದಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ನಡೆಸಿದ ದೃಶ್ಯ ಶುಕ್ರವಾರ ಕಂಡುಬಂತು. ಕೋಳಿ ಕಾಳಗವೂ ನಡೆಯಿತು. ಹಣ ವಿನಿಮಯದ ಬದಲಿಗೆ ಸರಕುಗಳ ವಿನಿಮಯ ನಡೆಯುತ್ತದೆ.

Comments are closed.