ರಾಷ್ಟ್ರೀಯ

ಜಾಗತಿಕ ಬಲಿಷ್ಠ ಪಾಸ್‌ಪೋರ್ಟ್‌ ಪಟ್ಟಿಯಲ್ಲಿ ಭಾರತ

Pinterest LinkedIn Tumblr


ದುಬೈ: ಜಾಗತಿಕ ಬಲಿಷ್ಠ ಪಾಸ್‌ಪೋರ್ಟ್‌ ಪಟ್ಟಿಯಲ್ಲಿ ಭಾರತ 78ನೇ ಸ್ಥಾನ ಅಲಂಕರಿಸಿದೆ.

ಜರ್ಮನಿ ಮೊದಲ ಸ್ಥಾನದಲ್ಲಿದೆ. ಏಷಿಯಾ ರಾಷ್ಟ್ರಗಳ ಪೈಕಿ ಸಿಂಗಾಪುರ ಅಗ್ರಪಂಕ್ತಿಯಲ್ಲಿದೆ. 156 ಅಂಕಗಳೊಂದಿಗೆ ಸೌತ್‌ ಕೊರಿಯಾ ರಾಷ್ಟ್ರವನ್ನು ಹಿಂದಿಕ್ಕಿದೆ.

ಇತರ ರಾಷ್ಟ್ರಗಳ ಭೇಟಿಗೆ ವೀಸಾ ರಹಿತ ಪ್ರವೇಶದಲ್ಲಿ ಭಾರತ 46 ಅಂಕ ಗಳಿಸಿದೆ. ಈ ಮೂಲಕ ಚೀನಾ (58) ಮತ್ತು ಪಾಕಿಸ್ತಾನ (94) ರಾಷ್ಟ್ರಗಳನ್ನು ಅಂಕಪಟ್ಟಿಯಲ್ಲಿ ಹಿಂದಿಕ್ಕಿದೆ.

ಅಫ್ಘಾನಿಸ್ತಾನವು ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅರ್ಟನ್‌ ಕ್ಯಾಪಿಟಲ್‌ ಜಾಗತಿಕ ಪಾಸ್‌ಪೋರ್ಟ್‌ ಸೂಚ್ಯಂಕ ಈ ಮಾಹಿತಿ ಹೊರಹಾಕಿದೆ.
‘ರಾಷ್ಟ್ರೀಯ ಪಾಸ್‌ಪೋರ್ಟ್‌ ಸೂಚ್ಯಂಕಗಳನ್ನು ಗಡಿ ಪ್ರವೇಶ, ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ ಪ್ರವಾಸಿಗರ ಸಂಖ್ಯೆ, ಆಯಾ ದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ, ಪ್ರವಾಸಿಗರ ಕುಟುಂಬದ ಆಂತರಿಕ ಭದ್ರತೆಯ ಆಧಾರದ ಮೇಲೆ ನಿರ್ಧರಿಸಲಾಗುವುದು’ ಎಂದು ಅರ್ಟನ್‌ ಕ್ಯಾಪಿಟಲ್‌ ವ್ಯವಸ್ಥಾಪಕ ನಿರ್ದೇಶಕ ಜಾನ್‌ ಹನಫಿನ್‌ ತಿಳಿಸಿದ್ದಾರೆ.

Comments are closed.