ರಾಷ್ಟ್ರೀಯ

ಪೋರ್ನ್ ವಿಡಿಯೋಗಳ ಕುರಿತು ಪೋರ್ನ್’ಹಬ್ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಮಹಿಳೆಯರ ಬಗ್ಗೆ ಹೇಳಿದ್ದೇನು..?

Pinterest LinkedIn Tumblr

ಪೋರ್ನ್ ವಿಡಿಯೋಗಳ ವೆಬ್’ಸೈಟ್’ಗಳಲ್ಲಿ ಪ್ರಮುಖವಾಗಿರುವ ಪೋರ್ನ್’ಹಬ್ ವಿಶ್ವದ ಪೋರ್ನ್ ವಿಷಯಗಳ ಬಗ್ಗೆ ವಾರ್ಷಿಕ ಸಮೀಕ್ಷೆ ನಡೆಸಿದ್ದು, ಈ ವರದಿಯಲ್ಲಿ ಭಾರತೀಯರ ಲೈಂಗಿಕ ಆಸಕ್ತಿಗಳ ಹಲವು ಸತ್ಯಾಂಶಗಳು ಬಯಲಾಗಿವೆ.

ಭಾರತೀಯರ ಲೈಂಗಿಕ ಆಸಕ್ತಿಗಳು ಹಾಗೂ ಸೆಕ್ಸ್ ಬಗ್ಗೆ ದಾಖಲಾದ ಪ್ರಮುಖ ಅಂಶಗಳು
1) ಅತೀ ಹೆಚ್ಚು ಸೆಕ್ಸ್ ವಿಡಿಯೋಗಳನ್ನು ನೋಡುವ 20 ದೇಶಗಳಲ್ಲಿ ಭಾರತಕ್ಕೆ 4ನೇ ಸ್ಥಾನವಿದೆ. ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕಾ, ಇಂಗ್ಲೆಂಡ್, ಕೆನಡಾ ದೇಶಗಳಿವೆ.

2) ಸೆಕ್ಸ್ ವಿಡಿಯೋ ವೆಬ್’ಸೈಟ್’ಗಳಲ್ಲಿ ಭಾರತೀಯರು ಹೆಚ್ಚಾಗಿ ಸರ್ಚ್ ಮಾಡುವುದು ‘ಇಂಡಿಯನ್’ ಇಂಡಿಯನ್ ವೈಫ್’ ಇಂಡಿಯನ್ ಕಾಲೇಜ್’ಗಳ ಸೆಕ್ಸ್ ವಿಡಿಯೋಗಳನ್ನು.

3) ಲೈಂಗಿಕ ವಿಡಿಯೋಗಳನ್ನು ನೋಡುವ ವಿಶ್ವದ ಇತರ ದೇಶಗಳಲ್ಲಿ ಭಾರತೀಯ ಮಹಿಳೆಯರು 4ನೇ ಸ್ಥಾನದಲ್ಲಿದ್ದು, ಶೇ.30 ಮಂದಿ ಸ್ತ್ರೀಯರು ಸೆಕ್ಸ್ ದೃಶ್ಯಗಳನ್ನು ವೀಕ್ಷಿಸುತ್ತಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

4) ಮಹಿಳೆಯರು ನೋಡುವ ಸೆಕ್ಸ್ ದೃಶ್ಯಗಳಲ್ಲಿ ಹೆಚ್ಚಾಗಿ ಇಷ್ಟಪಡುವುದು ಸಲಿಂಗ ಕಾಮಿ ವಿಡಿಯೋಗಳನ್ನು ಪುರುಷರು ಬಹುತೇಕ ಎಲ್ಲ ರೀತಿಯ ವಿಡಿಯೋಗಳನ್ನು ನೋಡಲು ಇಷ್ಟಪಡುತ್ತಾರೆ

5) ಸೆಕ್ಸ್ ವಿಡಿಯೋಗಳನ್ನು ಹೆಚ್ಚಾಗಿ ನೋಡುವವರ ವಯೋಮಿತಿ 18ರಿಂದ 45. ಉಳಿದವರು ವೀಕ್ಷಿಸಲು ಹಾತೊರೆದರೂ ವಯಸ್ಸಾದಂತೆ ಆಸಕ್ತಿ ಕಳೆದುಕೊಳ್ಳುತ್ತಾರೆ.

6) ವಿಡಿಯೋಗಳನ್ನು ವೀಕ್ಷಿಸುವ ಸಮಯ ಮಧ್ಯರಾತ್ರಿ. ವಿವಾಹೇತರ ಪುರುಷರು, ಮಹಿಳೆಯರು ಈ ಸಮಯದಲ್ಲಿ ಹೆಚ್ಚಾಗಿ ವೀಕ್ಷಿಸುತ್ತಾರೆ. ಗುಂಪಿನಲ್ಲಿ ವೀಕ್ಷಿಸುವವರ ಸಂಖ್ಯೆ ಕಡಿಮೆ, ಏಕಾಂಗಿಯಾಗಿ ನೋಡುವವರೆ ಹೆಚ್ಚು.

Comments are closed.