ರಾಷ್ಟ್ರೀಯ

ಜಂಕ್ ಫುಡ್ ಮತ್ತು ಸಿಹಿ ಪಾನೀಯಗಳ ಮೇಲೆ ಜೇಟ್ಲಿ ಕಣ್ಣು

Pinterest LinkedIn Tumblr


ನವದೆಹಲಿ, ಜ. ೧೬- ಕುರುಕಲು ತಿಂಡಿ (ಜಂಕ್ ಫುಡ್) ಮತ್ತು ಸಿಹಿ ಪಾನೀಯಗಳ ಮೇಲೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ತೆರಿಗೆ ಹೊರೆ ಬೀಳಲಿದೆ.

ಸಾರ್ವಜನಿಕರ ಆರೋಗ್ಯಕ್ಕೆ ಜಂಕ್ ಫುಡ್ ಮತ್ತು ಸಿಹಿ ಪಾನೀಯಗಳಿಂದ ಆಗುತ್ತಿರುವ ಧಕ್ಕೆಯ ಹಿನ್ನೆಲೆಯಲ್ಲಿ ಈ ಬಾಬ್ತಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರ, ಇದರಿಂದ ಸಂಗ್ರಹವಾಗುವ ಹೆಚ್ಚಿನ ತೆರಿಗೆಯನ್ನು ಸಾರ್ವಜನಿಕ ಆರೋಗ್ಯ ವಲಯಕ್ಕೆ ಉಪಯೋಗಿಸಲು ಚಿಂತಿಸಿದೆ.

ವಿವಿಧ ಕ್ಷೇತ್ರಗಳ 11 ಮಂದಿ ತಜ್ಞರ ತಂಡ ಜಂಕ್ ಫುಡ್ ಮತ್ತು ಸಿಹಿ ಪಾನೀಯಗಳ ಬಳಕೆಯನ್ನು ಮಿತಿಗೊಳಿಸಲು ಇವುಗಳ ಸೇವನೆಯಿಂದ ಜನರ ಆರೋಗ್ಯದ ಮೇಲೆ ಆಗುವ ಹಾನಿಯನ್ನು ತಪ್ಪಿಸಲು ಈ ಬಾಬಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ತಂತ್ರಜ್ಞರ ತಂಡದಲ್ಲಿ ಆರೋಗ್ಯ, ಶುಚಿತ್ವ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳೂ ಇದ್ದಾರೆ.

ಇವುಗಳ ಸೇವನೆಯಿಂದ ಜನರಲ್ಲಿ ಸ್ಥೂಲಕಾಯ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿತ ಕಾಯಿಲೆ ಇತ್ಯಾದಿ, ಬದಲಾದ ಜೀವನ ಶೈಲಿ, ಸಂಬಂಧಿತ ಕಾಯಿಲೆಗಳು ಜನರನ್ನು ಬಹುವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಇವುಗಳ ಜಾಹೀರಾತಿನ ಮೇಲೆ ಮಿತಿ ಏರಲು ಸರ್ಕಾರಕ್ಕೆ ಸೂಚಿಸಿರುವುದಾಗಿ ತಜ್ಞರ ತಂಡ ಹೇಳಿದೆ.

ಗಂಭೀರ ಪರಿಣಾಮ
ಜಾಗತಿಕವಾಗಿ ಜಂಕ್ ಫುಡ್ ಸೇವನೆ ಗಂಭೀರ ಪರಿಣಾಮಗಳನ್ನು ಬೀರಿದೆ. ವಿಶೇಷವಾಗಿ 5 ವರ್ಷದ ಒಳಗಿನ ಮಕ್ಕಳು ಸ್ಥೂಲಕಾಯರಾಗುತ್ತಿದ್ದಾರೆ. ಇಂತಹವರ ಸಂಖ್ಯೆ ಜಾಗತಿಕವಾಗಿ 41 ದಶಲಕ್ಷದಷ್ಟಿದೆ ಎಂದು 2014ರ ಸಾಲಿನ ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿತ್ತು.

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿಯೂ ಬದಲಾದ ಜೀವನ ಶೈಲಿಗೆ ಸಂಬಂಧಿಸಿದ ಕಾಯಿಲೆಗಳು ವ್ಯಾಪಕವಾಗಿವೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.

Comments are closed.