
ನವದೆಹಲಿ: ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಕಾಲೊರಸು (ಡೋರ್ ಮ್ಯಾಟ್) ಮಾರಾಟಕ್ಕಿಟ್ಟು ಇ–ಕಾಮರ್ಸ್ ಸಂಸ್ಥೆ ‘ಅಮೆಜಾನ್ ಕೆನಡಾ’ ವಿವಾದಕ್ಕೊಳಗಾಗಿತ್ತು. ಇದೀಗ ಅಮೆಜಾನ್ ಡಾಟ್ ಕಾಂನಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಡಲಾಗಿದೆ.
ಅಮೆಜಾನ್ ಡಾಟ್ ಕಾಂ ಶಾಪಿಂಗ್ ಪೋರ್ಟಲ್‍ನಲ್ಲಿ Gandhi Flip Flops – ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಟ್ಟಿದ್ದು ಇದರ ಬೆಲೆ 16.99 ಡಾಲರ್ (₹1157.44) ಆಗಿದೆ.
ಅಮೆಜಾನ್ ಕೆನಡಾದಲ್ಲಿ ತ್ರಿವರ್ಣ ಧ್ವಜದ ಮಾದರಿಯ ಕಾಲೊರಸು ಮಾರಾಟಕ್ಕಿಟ್ಟಿದ್ದಕ್ಕೆ ಭಾರತೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ‘ಅಮೆಜಾನ್ ಕೆನಡಾ’ ಸಂಸ್ಥೆ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಸಂಸ್ಥೆಯ ಅಧಿಕಾರಿಗಳ ವೀಸಾ ರದ್ದು ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಎಚ್ಚರಿಸಿದ್ದರು.
ಈ ಎಚ್ಚರಿಕೆಗೆ ಮಣಿದ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಅಮಿತ್ ಅಗರ್‌ವಾಲ್ ಅವರು, ಭಾರತೀಯರ ಭಾವನೆಗಳನ್ನು ಘಾಸಿಗೊಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಧ್ವಜ ಚಿತ್ರಣವಿರುವ ಕಾಲೊರೆಸು ವಿನ್ಯಾಸಗೊಳಿಸಿದ್ದು ಕೆನಡಾದ ವ್ಯಕ್ತಿಯೇ ಹೊರತು ಅಮೆಜಾನ್ ಅಲ್ಲ ಎಂದು ಸ್ಪಷ್ಟ ಪಡಿಸಿ ವೆಬ್‌ಸೈಟ್‌ನಿಂದ ಉತ್ಪನ್ನವನ್ನು ತೆಗೆದುಹಾಕಿದ್ದರು.
Comments are closed.