ರಾಷ್ಟ್ರೀಯ

 ಬದಲಿಸಲು ಸಾಧ್ಯವಾಗದ ಪಾನ್‌ಕಾರ್ಡ್ ನ ನೂತನ ವಿನ್ಯಾಸ

Pinterest LinkedIn Tumblr


ದೆಹಲಿ, ಜ. ೧೪- ಬದಲಿಸಲು ಸಾಧ್ಯವಾಗದ ನೂತನ ವಿನ್ಯಾಸದ ಹಾಗೂ ಹಠಾತ್ ಪ್ರತಿಕ್ರಿಯಿಸುವ ಕೋಡ್ ಸೌಲಭ್ಯದ ಹೊಸ ವಿನ್ಯಾಸದ ಪಾನ್‌ಕಾರ್ಡ್ ವಿತರಣೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜ. 1 ರಿಂದಲೆ ನೂತನ ರೂಪದ ಪಾನ್‌ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಕಾರ್ಡಿನಲ್ಲಿನ ವಿವರಗಳು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ನೂತನ ಕಾರ್ಡ್‌ಗಳ ಮುದ್ರಣ ಜವಾಬ್ದಾರಿಯನ್ನು ಎನ್‌ಎಸ್‌ಡಿಎಲ್, ಯುಟಿಐಐ, ಟಿಎಸ್‌ಎಲ್‌ಗೆ ನೀಡಲಾಗಿದೆ.
ಈಗಾಗಲೇ ಪಾನ್‌ಕಾರ್ಡ್ ಹೊಂದಿರುವವರೂ ಸಹ ನೂತನ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ನೂತನ ಕಾರ್ಡ್‌ಗಳಲ್ಲಿ ತ್ವರಿತ ಕೋಡ್‌ಗಳ ವ್ಯವಸ್ಥೆ ಅಳವಡಿಸಲಾಗಿದ್ದು, ತಪಾಸಣೆಗೆ ಸಹಕಾರಿಯಾಗಲಿದೆ. ನಕಲಿಗೆ ಅವಕಾಶವಿಲ್ಲದಂತೆ ಟ್ಯಾಂಪರ್ ಪ್ರೂಫ್ ಮಾಡಲಾಗಿದೆ.
ಈಗಾಗಲೇ ದೇಶದಲ್ಲಿ 25 ಕೋಟಿಗೂ ಅಧಿಕ ಜನ ಪಾನ್‌ಕಾರ್ಡ್‌ನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ 2.5 ಕೋಟಿ ಜನ ಪಾನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.