ರಾಷ್ಟ್ರೀಯ

ದೇಶದ ಜನತೆಗೆ ಮಕರ ಸಂಕ್ರಾಂತಿ, ಪೊಂಗಲ್ ಹಬ್ಬದ ಶುಭಾಷಯ ಕೋರಿದ ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ದೇಶದಾದ್ಯಂತ ಮಕರ ಸಂಕ್ರಾಂತಿ, ಪೊಂಗಲ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಟ್ವಿಟರ್ ನಲ್ಲಿ ಶುಭಾಶಯಗಳನ್ನು ಕೋರಿರುವ ಪ್ರಧಾನಿ ಮೋದಿಯವರು, ಇಂದು ಭಾರತದಾದ್ಯಂತ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದು, ಹಬ್ಬದ ಸಂಭ್ರದಲ್ಲಿರುವ ಜನತೆಗೆ ಈ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ಈ ಬಾರಿಯ ಹಬ್ಬ ನಿಮ್ಮೆಲ್ಲರಿಗೂ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಸ್ನೇಹಿತರು ಪೊಂಗಲ್ ಹಬ್ಬವನ್ನು ಆಚರಿಸುತ್ತಿದ್ದು, ಈ ಮೂಲಕ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ ‘ಮಾಘ ಬಿಹು’ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅಸ್ಸಾಂ ಜನತೆಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ.

ಈ ಎಲ್ಲಾ ಹಬ್ಬಗಳಲ್ಲದೆ, ಭಾರತದ ಇನ್ನಿತರೆ ಪ್ರದೇಶಗಳಲ್ಲೂ ವಿವಿಧ ಹಬ್ಬಗಳನ್ನು ಆಚರಿಸಲಾಗಿತ್ತಿದ್ದು, ಈ ಬಾರಿಯ ಹಬ್ಬ ಎಲ್ಲರ ಜೀವನದಲ್ಲೂ ಬಣ್ಣ ಹಾಗೂ ಸಂತೋಷವನ್ನು ನೀಡಲಿ. ಭಾರತದಲ್ಲಿರುವ ವೈವಿಧ್ಯತೆಯೇ ದೊಡ್ಡ ಶಕ್ತಿಯಾಗಿದೆ. ಈ ಬಾರಿಯ ಹಬ್ಬ ಶ್ರಮದಾಯಕ ರೈತರಿಗೆ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ಶುಭಾಶಯ ಕೋರಿದ್ದಾರೆ.

Comments are closed.