ರಾಷ್ಟ್ರೀಯ

ನಿರುದ್ಯೋಗಿಗಳಿಗೆ 5 ಸಾವಿರ ರೂ. ಮಾಸಿಕ ಭತ್ಯೆ ನೀಡಲು ಕೇಂದ್ರದ ಯೋಜನೆ!

Pinterest LinkedIn Tumblr


ನವದೆಹಲಿ(ಜ.13): ದೇಶಾದ್ಯಂತ ನಿರುದ್ಯೋಗ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರುದ್ಯೋಗ ಭತ್ಯೆ ನೀಡಲು ಚಿಂತನೆ ನಡೆಸಿದೆಯಂತೆ. ಈ ಯೋಜನೆಗಾಗಿ 12 ಸಾವಿರ ಕೋಟಿ ಹಣವನ್ನು ತೆಗೆದಿಟ್ಟು, ಆಯ್ದ, ಅತ್ಯಂತ ಬಡ ನಿರುದ್ಯೋಗಿಗಳಿಗೆ ವಾರ್ಷಿಕ 5 ಸಾವಿರ ರೂ. ಭತ್ಯೆ ನೀಡಲು ಕೇಂದ್ರ ಚಿಂತನೆ ನಡೆಸಿದೆ.
ಆದರೆ, ಈ ಯೋಜನೆಗೆ ಹಣ ಹೊಂದಿಸುವುದು ಹೇಗೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ. ಈಗಾಗಲೇ ಇರುವ ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಈ ಯೋಜನೆಯನ್ನೂ ಜಾರಿಗೆ ತಂದರೆ, ಪರಿಸ್ಥಿತಿ ಬಿಗಡಾಯಿಸಬಹುದು ಎಂಬ ಆತಂಕ ಸರ್ಕಾರಕ್ಕೆ ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ನಿರುದ್ಯೋಗಿಗಳನ್ನು ಗುರುತಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ನೀತಿ ಆಯೋಗಕ್ಕೆ ಸೂಚನೆ ನೀಡಲಾಗಿದೆಯಂತೆ. ಆದರೆ, ದೇಶದಲ್ಲಿ 48 ಕೋಟಿಗೂ ಹೆಚ್ಚು ಜನ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಇದುವರೆಗೆ ಸರ್ಕಾರದ ಬಳಿ ಯಾವುದೇ ದಾಖಲಾತಿಗಳಿಲ್ಲ. ಈ ಹಿಂದಿನ ಸರ್ಕಾರಗಳೂ ಈ ಕುರಿತು ದಾಖಲೆಗಳನ್ನು ಇಟ್ಟಿಲ್ಲ. ಹೀಗಾಗಿ ಹೊಸದಾಗಿ ಈ ಯೋಜನೆ ಜಾರಿಗೆ ತಂದರೆ, ನಿರುದ್ಯೋಗಿಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಿ ಕಾಡಲಿದೆ.
ಈಗಾಗಲೇ ಪಂಜಾಬ್, ಛತ್ತೀಸ್​ಘಡ, ಹರಿಯಾಣ, ಮಧ್ಯಪ್ರದೇಶ, ಕೇರಳಗಳಲ್ಲಿ ನಿರುದ್ಯೋಗ ಭತ್ಯೆ ಯೋಜನೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಇನ್ನೂ ಯೋಜನೆ ಜಾರಿಗೆ ತಂದಿಲ್ಲ. ಸದ್ಯಕ್ಕಿದು ಚಿಂತನೆ ಮಾತ್ರ! ಏಕೆಂದರೆ, ಈ ಯೋಜನೆ ಜಾರಿಗೆ ತಂದರೆ, ಪೆಟ್ರೋಲಿಯಂ, ಗ್ಯಾಸ್, ಆಹಾರಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಕಡಿತ ಮಾಡಬೇಕಾಗತ್ತೆ.

Comments are closed.