ರಾಷ್ಟ್ರೀಯ

ನೋಟು ನಿಷೇಧದ ಮಾಹಿತಿ ನೀಡಲು ನಿರಾಕರಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್

Pinterest LinkedIn Tumblr


ಬ್ಲೂಮ್‌ಬರ್ಗ್(ಅಮೆರಿಕ), ಜ. ೧೩- ಪ್ರಾಣ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂಬ ಕಾರಣವನ್ನು ಮುಂದಿಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೋಟು ರದ್ದತಿ ಬಗ್ಗೆ ನಿಖರ ವಿವರಗಳನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸಿದೆ.
ಕಳೆದ ನವೆಂಬರ್‌ನಲ್ಲಿ ಇಂಧನ ಸಚಿವ ಪಿಯೂಷ್ ಗೋಯಲ್ ಸಂಸತ್ತಿನಲ್ಲಿ `ಆರ್‌ಬಿಐ ನೋಟು ರದ್ದತಿಗೆ ಶಿಫಾರಸು ಮಾಡಿತ್ತು, ಅದಕ್ಕೆ ಸಚಿವ ಸಂಪುಟ ಸಮ್ಮತಿಸಿತ್ತು, ಪ್ರಧಾನಿ ಮೋದಿ ನ. 8 ರಂದು ಪ್ರಕಟಿಸಿದರು` ಎಂದು ಹೇಳಿದ್ದರು.
ನೋಟು ರದ್ದತಿಯನ್ನು ಮೋದಿ ಅವರ ಭಾಷಣಕ್ಕೆ 3 ಗಂಟೆಗಳ ಮೊದಲು ಅನುಮೋದಿಸಲಾಗಿತ್ತು ಇದಕ್ಕೆ ಮುನ್ನ ಈ ಬಗ್ಗೆ ಎಲ್ಲೂ ಚರ್ಚಿಸಿರಲಿಲ್ಲ, ಎಂದೂ ಅವರು ಹೇಳಿದ್ದು ಈಗ ಬ್ಲೂಮ್‌ಬರ್ಗ್ ತನ್ನ ಸುದ್ದಿ ಹಕ್ಕನ್ನು ಮುಂದಿರಿಸಿ ಮಾಹಿತಿ ಕೇಳಿದೆ.

Comments are closed.