ರಾಷ್ಟ್ರೀಯ

ಕಾಲೇಜಿಗೆ ಬರಬೇಕೆಂದರೆ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಬಾಯ್ ಫ್ರೆಂಡ್ ಇರಲೇಬೇಕು….! ಇಂಥದ್ದೊಂದು ನೋಟಿಸ್ ಕಂಡಿದ್ದು ಇಲ್ಲಿ…

Pinterest LinkedIn Tumblr

ಬೆಂಗಳೂರು: ಕಾಲೇಜಿಗೆ ಬರಬೇಕೆಂದರೆ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಬಾಯ್ ಫ್ರೆಂಡ್ ಹೊಂದಿರಬೇಕು, ಇದು ಬೆಂಗಳೂರಿನ ಆರ್.ವಿ. ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಕಂಡು ಬಂದ ನೋಟಿಸ್.

ಕೆಲ ಪುಂಡ ವಿದ್ಯಾರ್ಥಿಗಳು ಈ ಕೃತ್ಯವನ್ನೆಸಗಿದ್ದು, ಆರ್. ವಿ. ಕಾಲೇಜ್ ಲೆಟರ್ ಹೆಡ್ ಹೊಂದಿರುವ ನೋಟಿಸ್‌ನಲ್ಲಿ ಪ್ರಾಚಾರ್ಯರ ನಕಲಿ ಸಹಿ ಇದೆ.

ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಹಿತದೃಷ್ಟಿಯಿಂದ ಫೆಬ್ರವರಿ 14(ಪ್ರೇಮಿಗಳ ದಿನ) ರೊಳಗೆ ಕಡ್ಡಾಯವಾಗಿ ಬಾಯ್ ಫ್ರೆಂಡ್ ಹೊಂದಿರಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಈ ಕುರಿತು ಕಾಲೇಜಿನ ಆಡಳಿತ ಮಂಡಳಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದೆ. ಕೆಲ ತಿಂಗಳ ಹಿಂದೆ ಮಣಿಪಾಲ್ ವಿಶ್ವವಿದ್ಯಾಲಯದ ಹೆಸರಲ್ಲಿ ಕೆಲ ಪುಂಡ ವಿದ್ಯಾರ್ಥಿಗಳು ಇದೇ ರೀತಿಯಲ್ಲಿ ನೋಟಿಸ್ ಹಾಕಿದ್ದರು.

Comments are closed.