ಹೈದ್ರಾಬಾದ್(ಜ.12): 16 ವರ್ಷದ ಅಪ್ರಾಪ್ತ ಬಾಲಕಿಗೆ ಕಾನೂನು ಬಾಹಿರವಾಗಿ 35 ವರ್ಷದ ಪುರುಷನ ಜೊತೆ ಮದುವೆ ಮಾಡಿಸಿದ್ದಲ್ಲದೇ ತನ್ನ ದಾಂಪತ್ಯ ಕರ್ತವ್ಯಗಳನ್ನ ನಿರ್ವಹಿಸುವಂತೆ ತಾಕೀತು ಮಾಡಿ ಲೀಗಲ್ ನೋಟಿಸ್ ಕಳುಹಿಸಿರುವ ಘಟನೆ ಹೈದ್ರಾಬಾದ್`ನಲ್ಲಿ ನಡೆದಿದೆ.
ಈ ಬಗ್ಗೆ ಪೊಲೀಸರೂ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ಮಕ್ಕಳ ಹಕ್ಕು ಹೋರಾಟಗಾರರ ಮೊರೆ ಹೋಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಯುವತಿಯನ್ನ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಸೋದರತ್ತೆಗೆ ಅನಾರೋಗ್ಯ ಇದ್ದುದರಿಂದ ಸಾಯುವ ಮುನ್ನ ಮಗನ ಮದುವೆ ನೋಡಬೇಕೆಂದು ಬ್ಲಾಕ್ ಮೇಲ್ ಮಾಡಿ ಮದುವೆ ಮಾಡಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕಿ ಮದುವೆ ಸಂದರ್ಭ ಬಲವಂತವಾಗಿ ಆತನ ವಯಸ್ಸು ತಿಳಿಸದೇ ಮದುವೆ ಮಾಡಿಸಿದ್ದಾರೆ ಎಂದು ನೋವು ತೋಡಿಕೊಂಡಿದ್ದಾಳೆ. ಇದೀಗ, ಯುವತಿ ಗಂಡನ ಮನೆಯಿಂದ ತವರಿಗೆ ವಾಪಸ್ ಬಂದಿದ್ದಾಳೆ. ಇದಿಗ, ಯುವತಿಯ ಬೆಂಬಲಕ್ಕೆ ನಿಂತಿರುವ ಪೋಷಕರು ಮದುವೆ ಸಂದರ್ಭ ಕೊಟ್ಟಿರುವ ವರದಕ್ಷಿಣೆ ಮತ್ತು ಚಿನ್ನಾಭರಣವನ್ನ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ವಕೀಲರ ಮೂಲಕ ನೋಟಿಸ್ ಕಳುಹಿಸಿರುವ ಗಂಡ ದಾಂಪತ್ಯದ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದ್ದಾನೆ.
Comments are closed.