ನವದೆಹಲಿ: ಬಿಎಸ್‍ಎಫ್ ಯೋಧರಿಗೆ ನೀಡುವ ಆಹಾರ ಕಳಪೆಯಾಗಿದೆ ಎಂದು ಹಾಗೂ ಯೋಧರ ಕಷ್ಟಗಳನ್ನು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಿದ್ದ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ವರ್ಗಾವಣೆ ಮಾಡಿ ಪ್ಲಂಬರ್ ಕೆಲಸ ನೀಡಲಾಗಿದೆ ಎಂದು ಇಂಡಿಯಾ ಟುಡೆ ವೆಬ್‌ಸೈಟ್ ವರದಿ ಮಾಡಿದೆ.
ಆದರೆ ಎಎನ್‍ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಎಸ್‍ಎಫ್ ಐಜಿ ಡಿ.ಕೆ ಉಪಾಧ್ಯಾಯ್ ಅವರು, ತೇಜ್ ಅವರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು.
ತೇಜ್ ಬಹದ್ದೂರ್ ಮೇಲೆ ಯಾರೂ ಒತ್ತಡ ಹೇರದಂತೆ ಅವರನ್ನು ಮತ್ತೊಂದು ಪ್ರಧಾನ ಕಾರ್ಯಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಅವರಿಗೆ ಯಾವ ಕೆಲಸ ನೀಡಲಾಗಿದೆ ಎಂಬುದರ ಬಗ್ಗೆ ಡಿ.ಕೆ ಉಪಾಧ್ಯಾಯ್ ಮಾತನಾಡಿಲ್ಲ.
Comments are closed.