
ತಮಿಳು ನಾಡಿನ ‘ಅಮ್ಮ’ನ ಸಾವಿನ ಸುತ್ತಾ ಮತ್ತೆ ಮತ್ತೆ ಅನುಮಾನಗಳು ಹುಟ್ಟುತ್ತಲೇ ಹೋಗ್ತಿದೆ. ಖುದ್ದು ನ್ಯಾಯಧೀಶರೇ ವೈಯಕ್ತಿಕವಾಗಿ ಜಯ ಸಾವಿನ ಬಗ್ಗೆ ವ್ಯಕ್ತ ಪಡಿಸಿದ್ದ ಅನುಮಾನ ಈಗ ಮತ್ತೊಮ್ಮೆ ನ್ಯಾಪೀಠದ ಅನುಮಾನಕ್ಕೂ ಕಾರಣವಾಗಿದೆ. ಪುರುಚ್ಛಿ ತಲೈವಿ ಎಂದೇ ಖ್ಯಾತರಾಗಿದ್ದ ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಸಾವಿನ ಬಗ್ಗೆ ಮೂಡಿರುವ ಶಂಕೆಗಳ ನಿವಾರಣೆಗೆ ಮದ್ರಾಸ್ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ.
ಜಯಲಲಿತಾ ಸಾವು ಮತ್ತು ಅದಕ್ಕೂ ಮೊದಲು ಅವ್ರ ಅನಾರೋಗ್ಯ ಸಂಬಂಧಿ ವಿವರ ನೀಡುವಂತೆ ಮದ್ರಾಸ್ ಹೈಕೋರ್ಟ್ ಚೆನ್ನೈನ ಅಪೋಲೋ ಆಸ್ಪತ್ರೆಗೆ ಸೂಚನೆ ನೀಡಿದೆ. ಈ ವರದಿಯನ್ನು 4 ವಾರಗಳೊಳಗೆ ಸಿದ್ಧ ಪಡಿಸಿದ ಲಕೋಟೆಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ತಾಕೀತು ಮಾಡಿದೆ. ಅಮ್ಮನ ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ಎಐಎಡಿಎಂಕೆ ಕಾರ್ಯಕರ್ತ ಜೋಸೆಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್, ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಅಪೋಲೋಗೆ 4 ವಾರಗಳ ಗಡುವು ನೀಡಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿದೆ. ಅಷ್ಟೇ ಅಲ್ಲದೇ ಅಮ್ಮನ ಸಾವಿನ ಕುರಿತು ಈ ಮೊದಲೇ ನ್ಯಾಯಾಧೀಶರು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ ಮರಣೋತ್ತರ ಪರೀಕ್ಷೆ ನಡೆಸಿ ಎಂಬ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸಿತ್ತು.
Comments are closed.