ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಬಿಜೆಪಿ ಜಯಭೇರಿ

Pinterest LinkedIn Tumblr


ನಾಗಪುರ(ಜ. 09): ಮಹಾರಾಷ್ಟ್ರದ ನಾಲ್ಕನೇ ಹಾಗೂ ಅಂತಿಮ ಹಂತದ ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ನಾಗಪುರ ಮತ್ತು ಗೋಂಡ್ಯಾ ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನಂಬರ್ ಒನ್ ಸ್ಥಾನ ಗಳಿಸಿದೆ. 192 ನಗರಾಧ್ಯಕ್ಷ ಸ್ಥಾನಗಳ ಪೈಕಿ ಬಿಜೆಪಿ 78ರಲ್ಲಿ ಗೆಲುವು ಪಡೆದಿದೆ. ಕಾಂಗ್ರೆಸ್ 36, ಶಿವಸೇನೆ 26 ಸ್ಥಾನಗಳಿಗೆ ತೃಪ್ತಿಪಟ್ಟಿವೆ. ಎನ್’ಸಿಪಿ 21 ಸ್ಥಾನ ಗಳಿಸಿದರೆ, ಇತರರಿಗೆ 31 ಸ್ಥಾನಗಳು ಹೋಗಿವೆ.
ಇನ್ನು, ನಗರಸೇವಕ ಕ್ಷೇತ್ರಗಳ ಪೈಕಿ ಬಿಜೆಪಿ 1,207 ಸ್ಥಾನ ಗಳಿಸಿ ಅಗ್ರಗಣ್ಯನೆನಿಸಿದೆ. ಕಾಂಗ್ರೆಸ್ 919, ಶಿವಸೇನೆ 616 ಮತ್ತು ಎನ್’ಸಿಪಿ 788 ಸ್ಥಾನಗಳನ್ನು ಪಡೆದಿವೆ.
ಕಾಂಗ್ರೆಸ್ ಮತ್ತು ಎನ್’ಸಿಪಿಯ ಭದ್ರಕೋಟೆ ಎನಿಸಿದ ನಾಗಪುರ ಮತ್ತು ಗೊಂಡ್ಯಾ ಜಿಲ್ಲೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅಚ್ಚರಿ ಹುಟ್ಟಿಸಿದೆ. ನರೇಂದ್ರ ಮೋದಿ ಸರಕಾರದ ನೋಟು ಅಮಾನ್ಯ ಕ್ರಮದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣಾ ಫಲಿತಾಂಶ ಬಂದಿರುವುದು ಕುತೂಹಲ ಮೂಡಿಸಿದೆ. ಕೇಂದ್ರ ಸರಕಾರದ ಕ್ರಮದ ಪರವಾಗಿ ಇದು ಬಂದಿರುವ ಜನಾದೇಶವೆಂದು ಭಾರತೀಯ ಜನತಾ ಪಕ್ಷ ಹೇಳಿಕೊಂಡಿದೆ.
ಕೇಂದ್ರದ ಕ್ರಮವನ್ನು ಮಿತ್ರಪಕ್ಷವೆನಿಸಿದ ಶಿವಸೇನೆ ಕೂಡ ವಿರೋಧಿಸಿದೆ. ಆದರೆ, ನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಗೂ ಹಿನ್ನಡೆಯಾಗಿರುವುದು ಇಲ್ಲಿ ಗಮನಾರ್ಹ. ಮಹಾರಾಷ್ಟ್ರದಲ್ಲಿ ಈ ಮೊದಲು ನಡೆದ ಮೊದಲ ಮೂರು ಹಂತದ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಪಡೆದಿತ್ತು.

Comments are closed.