ಚೆನ್ನೈ: ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿ ಕಾವೇರಿ ನೀರು ಹರಿಸುವಲ್ಲಿ ವಿಫಲವಾಗಿರುವ ಕರ್ನಾಟಕ ಸರ್ಕಾರ, ತಮಗಾಗಿರುವ ₹2480 ಕೋಟಿ ನಷ್ಟವನ್ನು ಭರಿಸಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಆಗ್ರಹಿಸಿದೆ.
ಈ ಸಂಬಂಧ ಎರಡೂ ರಾಜ್ಯಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಒಂದು ವಾರದೊಳಗೆ ಒದಗಿಸಬೇಕೆಂದು ಸೂಚಿಸಿರುವ ಸುಪ್ರೀಂಕೋರ್ಟ್, ನಾಲ್ಕು ವಾರದೊಳಗೆ ಎಲ್ಲಾ ಮಾಹಿತಿಗಳ ವಿವರಗಳನ್ನೊಳಗೊಂಡ ಅಫಿಡೆವಿಟ್‌ನ್ನು ಸಹ ಕಡ್ಡಾಯವಾಗಿ ಸಲ್ಲಿಸಬೇಕೆಂದು ತಿಳಿಸಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಮಿತವ ರೋಯ್ ಹಾಗೂ ಎ.ಎಮ್ ಖಾನ್ವಿಲ್ಕರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ವಿವಾದ ಸಂಬಂಧದ ಮಧ್ಯಂತರ ಆದೇಶವನ್ನು ಮುಂದೂಡಿದ್ದು, ಮುಂದಿನ ಆದೇಶ ಬರುವ ವರೆಗೂ ಪ್ರತಿನಿತ್ಯ 2000ಕ್ಯುಸೆಕ್ ನೀರು ಹರಿಸುವುದನ್ನು ಮುಂದುವರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
ಎರಡೂ ರಾಜ್ಯಗಳ ವಾದವನ್ನು ಜನವರಿ 4ರಿಂದ ಫೆಬ್ರವರಿ 7ರವರೆಗೆ (ಮೂರು ವಾರಗಳ ಕಾಲ) ಆಲಿಸಲಿರುವ ಸುಪ್ರೀಂ ಕೋರ್ಟ್, ಈ ವಿವಾದವನ್ನು ಬಗೆಹರಿಸುವ ವಿಶ್ವಾಸ ವ್ಯಕ್ತ ಪಡಿಸಿದೆ.
Comments are closed.