ರಾಷ್ಟ್ರೀಯ

ಲೈಂಗಿಕತೆಗೆ ಒಪ್ಪದ ಯುವತಿಯ ಕತ್ತು ಸೀಳಿದ ಕಟುಕ !

Pinterest LinkedIn Tumblr

ಹೈದರಾಬಾದ್: 20 ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ದುಷ್ಕರ್ಮಿಯೊಬ್ಬ ಆಕೆಯ ಕತ್ತು ಸೀಳಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಇಲ್ಲಿನ ನಗರಕುರ್ನೂಲ್ ಜಿಲ್ಲೆಯ ವೆಲ್ಲಂಪಳ್ಳಿಯಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದ ನರೇಶ್ ಎಂಬಾತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯ ಮೇಲೆ ಈ ಕೃತ್ಯವೆಸಗಿದ್ದಾನೆ.

ಶುಕ್ರವಾರದಂದು ನರೇಶ್ ಗೆಳೆಯನನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ಹೇಳಿ ಯುವತಿಯನ್ನು ತನ್ನೊಂದಿಗೆ ಬರಲು ಕೇಳಿದ್ದ. ಮಾರ್ಗ ಮಧ್ಯೆ ನರೇಶ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದಾನೆ. ಈ ವೇಳೆ ಇದನ್ನು ವಿರೋಧಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯ ಮೇಲೆ ದಾಳಿ ಮಾಡಿ, ಕತ್ತು ಸೀಳಲು ಮುಂದಾಗಿದ್ದಾನೆ.

ಇದರಿಂದ ಯವತಿ ತಪ್ಪಿಸಿಕೊಂಡಿದ್ದು ಆಕೆಯ ಕತ್ತಿನ ಮೇಲೆ ತೀವ್ರವಾಗಿ ಗಾಯವಾಗಿದೆ. ಯುವತಿಯ ಕತ್ತಿನಿಂದ ರಕ್ತ ಸುರಿಯುತ್ತಿರುವುದನ್ನು ನೋಡಿದ ಸ್ಥಳೀಯರು ಆಕೆಯನ್ನು ಹೈದರಾಬಾದಿನ ಆಸ್ಪತ್ರೆಗೆ ಕೊಂಡೊಯ್ಯುವುದರ ಜೊತೆಗೆ ಪೊಲೀಸರಿಗೂ ವಿಷಯ ಮುಟ್ಟಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಒಂದು ಪೆಟ್ರೋಲ್ ಕ್ಯಾನ್ ಪತ್ತೆಯಾಗಿದೆ. ಘಟನೆಯ ಬಗ್ಗೆ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಅಡಿ ಪ್ರಕರಣ ದಖಲಿಸಿಕೊಂಡಿರೋ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಸದ್ಯ ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆಂದು ವರದಿಯಾಗಿದೆ.

Comments are closed.