ರಾಷ್ಟ್ರೀಯ

ಐದು ರಾಜ್ಯಗಳ ಚುನಾವಣೆಯಲ್ಲಿ ನಾಲ್ಕರಲ್ಲಿ ಬಿಜೆಪಿ ಅಧಿಕಾರ: ಆಕ್ಸಿಸ್ ಸಮೀಕ್ಷೆ

Pinterest LinkedIn Tumblr


ನವದೆಹಲಿ: ಫೆಬ್ರವರಿ-ಮಾರ್ಚ್’ನಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಕೇಂದ್ರದ ನೋಟ್ ಬ್ಯಾನ್ ನಿರ್ಧಾರದ ಹಿನ್ನೆಲೆಯಲ್ಲಿ ಬಹಳ ಮಹತ್ವ ಪಡೆದುಕೊಂಡಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಬರಲು ಆರಂಭಿಸಿವೆ. ಇಂಡಿಯಾಟುಡೇ-ಆಕ್ಸಿಸ್ ಹಾಗೂ ಎಬಿಪಿ-ಲೋಕನೀತಿ ಸಮೀಕ್ಷೆಗಳು ಹೊರಬಂದಿವೆ. ಆಕ್ಸಿಸ್ ಸರ್ವೇ ಪ್ರಕಾರ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಒಂದರಲ್ಲಿ ಕಾಂಗ್ರೆಸ್ ಪದಗ್ರಹಣ ಮಾಡಬಹುದು ಎನ್ನಲಾಗಿದೆ. ಪಂಜಾಬ್’ನಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಬಿಟ್ಟರೆ ಇನ್ನುಳಿದಂತೆ ಬಿಜೆಪಿಗೆ ಸಂತಸದ ಸಂಗತಿಗಳು ಸಮೀಕ್ಷೆಯಲ್ಲಿವೆ. ಗೋವಾದಲ್ಲಿ ಅಧಿಕಾರ ಉಳಿಸಿಕೊಂಡು, ಬೇರೆ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಕಾಂಗ್ರೆಸ್ ಪಕ್ಷ ಎರಡು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ. ಪಂಜಾಬ್’ನಲ್ಲಿ ಅಧಿಕಾರ ಹಿಡಿಯಲಿದೆ. ಆಮ್ ಆದ್ಮಿ ಪಕ್ಷ ಪಂಜಾಬ್’ನಲ್ಲಿ ಅಧಿಕಾರ ಹಿಡಿಯದಿದ್ದರೂ ಎರಡನೇ ಸ್ಥಾನಕ್ಕೇರುವ ಮಟ್ಟಕ್ಕೆ ಹೋಗುತ್ತದೆ. ಆದರೆ, ಲೋಕನೀತಿ ಸಮೀಕ್ಷೆ ಪ್ರಕಾರ ಪಂಜಾಬ್’ನಲ್ಲಿ ಬಿಜೆಪಿ-ಅಕಾಲಿ ದಳ ಮೈತ್ರಿಕೂಟವೇ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯಲಿದೆ.
ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ವಿವರ:
ಸಮೀಕ್ಷೆ ನಡೆಸಿದ ದಿನ: 2016, ಡಿ.12-22
ಉತ್ತರಾಖಂಡ್:
ಒಟ್ಟು ಕ್ಷೇತ್ರಗಳು: 70
ಬಹುಮತಕ್ಕೆ: 36 ಸ್ಥಾನಗಳು
ಬಿಜೆಪಿ: 41-46
ಕಾಂಗ್ರೆಸ್: 18-23
ಇತರೆ: 2-6
—-
ಉತ್ತರಪ್ರದೇಶ:
ಒಟ್ಟು ಕ್ಷೇತ್ರಗಳು: 403
ಬಹುಮತಕ್ಕೆ: 202
ಬಿಜೆಪಿ: 206-216
ಎಸ್’ಪಿ: 92-97
ಬಿಎಸ್’ಪಿ: 79-85
ಕಾಂಗ್ರೆಸ್: 5-9
ಇತರೆ: 7-11
—-
ಪಂಜಾಬ್:
ಒಟ್ಟು ಕ್ಷೇತ್ರಗಳು: 117
ಬಹುಮತಕ್ಕೆ: 59
ಕಾಂಗ್ರೆಸ್: 49-55
ಎಎಪಿ: 42-46
ಬಿಜೆಪಿ+: 17-21
ಇತರೆ:
—–
ಗೋವಾ:
ಒಟ್ಟು ಕ್ಷೇತ್ರಗಳು: 40
ಬಿಜೆಪಿ: 20-24
ಕಾಂಗ್ರೆಸ್: 13-15
ಎಎಪಿ: 2-4
ಎಂಜಿಪಿ: 1-4
—–
ಮಣಿಪುರ:
ಒಟ್ಟು ಕ್ಷೇತ್ರಗಳು: 60
ಬಹುಮತಕ್ಕೆ: 31
ಬಿಜೆಪಿ: 31-35
ಕಾಂಗ್ರೆಸ್: 19-24
ಎನ್’ಪಿಎಫ್: 3-5
ಇತರೆ: 2-4

Comments are closed.