ರಾಷ್ಟ್ರೀಯ

ರಾಜಿಸಂಧಾನಕ್ಕೆ ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಬದ್ಧ

Pinterest LinkedIn Tumblr

mulayam_and_akhilesh
ಲಕ್ನೋ (ಜ.03): ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ನಡುವಿನ ರಾಜಕೀಯ ಪ್ರಹಸನಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಮೂರ್ನಾಲ್ಕು ತಾಸಿಗಿಂತ ಹೆಚ್ಚುಕಾಲ ಅವರಿಬ್ಬರ ನಡುವೆ ಆತ್ಮೀಯ ಮಾತುಕತೆ ನಡೆದಿದ್ದು ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ. ಆ ಪ್ರಕಾರ ಮುಲಾಯಂ ಸಿಂಗ್ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರಲಿದ್ದಾರೆ. ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜಿ ಸಂಧಾನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಟಿಕೆಟ್ ಹಂಚಿಕೆ ವಿಚಾರವಾಗಿ ಅಖಿಲೇಶ್ ಮತ್ತು ಮುಲಾಯಂ ಸಿಂಗ್ ಒಟ್ಟಾಗಿ ನಿರ್ಧರಿಸಲಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಮುಲಯಾಂ ಸಿಂಗ್ ಮತ್ತು ಶಿವಪಾಲ್ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಇಂದು ಅಪ್ಪ ಮಗ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಸದ್ಯ ಯಾದವೀ ಕಲಹ ಅಂತ್ಯಗೊಂಡಿದೆ.

Comments are closed.