ರಾಷ್ಟ್ರೀಯ

ಜ.31ರಿಂದ ಬಜೆಟ್‌ ಅಧಿವೇಶನಕ್ಕೆ ಶಿಫಾರಸು

Pinterest LinkedIn Tumblr

badget
ನವದೆಹಲಿ: ಸಂಸತ್‌ನಲ್ಲಿ ಜ. 31ರಿಂದ ಕೇಂದ್ರ ಬಜೆಟ್‌ ಅಧಿವೇಶನ ಆರಂಭಿಸಿ, ಫೆ. 1ರಂದು ಬಜೆಟ್‌ ಮಂಡನೆಗೆ ಸಂಸದೀಯ ವ್ಯವಹಾರಗಳ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ.

ಜ.31ರಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವರು. ಅಂದು ಆರ್ಥಿಕ ಸಮೀಕ್ಷೆ ನಡೆಯಲಿದೆ. ಅಧಿವೇಶನ ಫೆ. 9ರವರೆಗೆ ನಡೆಯಲಿದೆ.

ಬಜೆಟ್‌ ಅಧಿವೇಶನ ಸಂಬಂಧ ಸಂಸದೀಯ ವ್ಯವಹಾಗಳ ಸಮಿತಿ ಸಭೆ ನಡೆಸಿದ ಗೃಹ ಸಚಿವ ರಾಜನಾಥ್‌ ಸಿಂಗ್ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿ ಮಾಡಿದ್ದಾರೆ.

ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕುಮಾರ್‌, ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯಖಾತೆ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರು ಭಾಗವಹಿಸಿದ್ದರು.

ಪ್ರಸಕ್ತ ವರ್ಷ ಸಾಮಾನ್ಯ ಬಜೆಟ್‌ ಹಾಗೂ ರೈಲ್ವೆ ಬಜೆಟ್‌ ಒಟ್ಟಿಗೆ ಮಂಡನೆಯಾಗುವ ಮೂಲಕ ಶತಮಾನ ಕಾಲ ಪ್ರತ್ಯೇಕ ರೈಲ್ವೆ ಬಜೆಟ್‌ ಮಂಡಿಸುತ್ತಾ ಬಂದಿದ್ದ ಸಂಪ್ರದಾಯ ಕೊನೆಯಾಗಲಿದೆ.

Comments are closed.