ರಾಷ್ಟ್ರೀಯ

ಗುಜರಾತ್ ನ ವನ್ಸಾದ್ ನಲ್ಲಿ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವ ಕ್ರೈಸ್ತ ಮಿಷನರಿಗಳ ವಿರುದ್ಧ ಗುಡುಗಿದ ಮೋಹನ್ ಭಾಗವತ್

Pinterest LinkedIn Tumblr

Mohan_Bhagwat

ಅಹಮದಾಬಾದ್: ಗುಜರಾತ್ ನ ವನ್ಸಾದ್ ನಲ್ಲಿ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವ ಕ್ರೈಸ್ತ ಮಿಷನರಿಗಳ ವಿರುದ್ಧ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಗುಡುಗಿದ್ದಾರೆ.

ಗುಜರಾತಿನ ವಿರಾಟ್ ನಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಕ್ರೈಸ್ತ ಸಂಘಟನೆಗಳನ್ನು ಮೋಹನ್ ಭಾಗವತ್ ಕಟುವಾಗಿ ಟೀಸಿದ್ದು, ದೇಶದಲ್ಲಿ ಕ್ರೈಸ್ತ ಧರ್ಮ ಬಲಿಷ್ಠವಾಗಿಲ್ಲ ಹೀಗಾಗಿ ಕ್ರೈಸ್ತ ಮಿಷನರಿಗಳು ಮತಾಂತರ ಪ್ರಯತ್ನಕ್ಕೆ ಮುಂದಾಗಿದ್ದು ಭಾರತದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವುದು ಸಾಧ್ಯವಿಲ್ಲ ಎಂದರು.

ಕಳೆದ ಸಾವಿರ ವರ್ಷಗಳಲ್ಲಿ ಯುರೋಪ್, ಆಸ್ಟ್ರೇಲಿಯಾ, ಅಮೆರಿಕ ಸಹಿತ ದೇಶಗಳ ಜನರನ್ನು ಕ್ರೈಸ್ತಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಪೋಪ್ ಹೆಮ್ಮೆಯಿಂದ ಹೇಳುತ್ತಾರೆ. ಅವರ ಮುಂದಿನ ಗುರಿ ಏಷ್ಯಾ ಆಗಿದ್ದು, ಜಾತ್ಯಾತೀತ ರಾಷ್ಟ್ರ ಚೀನಾದಲ್ಲಿ ಮತಾಂತರ ಸಾಧ್ಯವೇ ಎಂದು ಪ್ರಶ್ನಿಸಿದರು.

ಕಳೆದ 300 ವರ್ಷಗಳಿಂದ ಭಾರತದಲ್ಲಿ ಕೇವಲ 6ರಷ್ಟು ಜನರನ್ನು ಮಾತ್ರ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗಿದ್ದು ಹೀಗಾಗಿ ತಮ್ಮ ಧರ್ಮವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕ್ರೈಸ್ತ ಮಿಷನರಿಗಳು ಮತಾಂತರ ಕಾರ್ಯಗಳನ್ನು ಮಾಡುತ್ತೀವೆ ಎಂದರು.

Comments are closed.