ರಾಷ್ಟ್ರೀಯ

ಹೊಸ ವರ್ಷಕ್ಕೆ ಪ್ರಧಾನಿ ಮೋದಿ ನೀಡಿದ ಹೊಸ ಗಿಫ್ಟ್ ಇಲ್ಲಿದೆ ನೋಡಿ….!

Pinterest LinkedIn Tumblr

New Delhi: Prime Minister Narendra Modi addressing at the launch of a new mobile app 'BHIM' to encourage e-transactions during the ''Digital Mela'' at Talkatora Stadium in New Delhi on Friday.  PTI Photo by Subhav Shukla (PTI12_30_2016_000126A)

ನವದೆಹಲಿ: ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಕನಸುಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಶನಿವಾರ ಕರೆ ನೀಡಿದ್ದಾರೆ.

ನೋಟ್ ನಿಷೇಧದ ನಂತರ ಇಂದು ಎರಡನೇ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನೋಟ್ ನಿಷೇಧದ ನಂತರ ನನಗೆ ನೂರಾರು ಪತ್ರಗಳು ಬಂದಿವೆ. ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಮ್ಮ ನೋವುಗಳನ್ನು ಹೇಳಿಕೊಂಡಿದ್ದಾರೆ ಮತ್ತು ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟ್ ವಿರುದ್ಧದ ನಿಮ್ಮ ಹೋರಾಟದಿಂದ ಹಿಂದೆ ಸರಿಯಬೇಡಿ ಎಂದು ಮನವಿ ಮಾಡಿದ್ದಾರೆ ಎಂದರು,

ನವೆಂಬರ್ 8ರ ನಂತರ ದೇಶದ ಸ್ಥಿತಿ ಬದಲಾಗಿದೆ. ಈಗ ಮಾಡಿರುವ ಶುದ್ಧೀಯಿಂದ ಮುಂದೆ ಅನೇಕ ವರ್ಷಗಳ ಕಾಲ ಫಲ ಸಿಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು ನವೆಂಬರ್ 8ರಂದು 500/1000 ರುಪಾಯಿ ನೋಟುಗಳನ್ನು ನಿಷೇಧಿಸಿದ್ದರು. ನಂತರದ ದಿನಗಳಲ್ಲಿ ಹೊಸ 500 ಮತ್ತು 2000 ರುಪಾಯಿ ನೋಟುಗಳನ್ನು ಚಾಲ್ತಿಗೆ ತಂದರು.

ಹೊಸ ವರ್ಷಕ್ಕೆ ಪ್ರಧಾನಿ ನೀಡಿದ ಕೊಡುಗೆಗಳು
-ಸಹಕಾರಿ ಬ್ಯಾಂಕ್ ಗಳ ಮೂಲಕ ಮೂರು ಕೋಟಿ ರೈತರಿಗೆ ಕಿಸಾನ್ ಕಾರ್ಡ್ ಬದಲು ರುಪೇ ಕಾರ್ಡ್ ವಿತರಣೆ
-ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರದ ಪ್ರದೇಶ 9ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ.4ರಷ್ಟು ಹಾಗೂ12 ಲಕ್ಷದವರೆಗಿನ ಸಾಲಕ್ಕೆ ಶೇ.4 ರಷ್ಟು ಬಡ್ಡಿ ಕಡಿತ
-ರೈತರ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲದ ಶೇ.60ರಷ್ಟು ಬಡ್ಡಿ ಮನ್ನಾ
-ಗರ್ಭಿಣಿಯರ ಆರೈಕೆಗಾಗಿ 6 ಸಾವಿರ ರೂಪಾಯಿ ಸಹಾಯಧನ
-ಹಿರಿಯ ನಾಗಕರಿಗೆ 75 ಲಕ್ಷ ರುಪಾಯಿವರೆಗಿನ ಠೇವಣಿಗೆ ಶೇ.8ರಷ್ಟು ಬಡ್ಡಿ
-ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸಹಜ ಸ್ಥಿತಿಗೆ ಬರುವಂತೆ ಮಾಡುತ್ತೇವೆ. ಜನರ ಕಷ್ಟಗಳಿಗೆ ಶೀಘ್ರವೇ ಪರಿಹಾರ

Comments are closed.