ರಾಷ್ಟ್ರೀಯ

ಜಯಾಲಲಿತಾರ ಮರಣೋತ್ತರ ಪರೀಕ್ಷೆಯನ್ನು ಹೇಗೆ ಮಾಡುತ್ತಾರೆ?

Pinterest LinkedIn Tumblr

jayalalitha
ಅಮ್ಮ ಸತ್ತಿದ್ದು ಹೇಗೆ ಅನ್ನೋದು. 25 ದಿನ ಕಳೆದ್ರು ಅದೊಂದು ಪ್ರಶ್ನೆಗೆ ಮಾತ್ರ ತಮಿಳು ನಾಡಿನ ಯಾವ ಮೂಲೆಯಿಂದಲೂ ಉತ್ತರ ಹೊರ ಬಂದೇ ಇಲ್ಲ. ಜನ ಕೇಳಿದ್ರು, ಜರ್ನಲಿಸ್ಟ್ ಕೇಳಿದ್ರು ಕೊನೆಗೆ ಜನ ನಾಯಕರು ಕೇಳಿದ್ರು ಕೂಡ ಜಯ ಸತ್ತಿದ್ದಾರೆ ಅನ್ನೋದೆ ಉತ್ತರವಾಯ್ತೇ ಹೊರತು ಸಾವಿನ ಕಾರಣ ಸತ್ತೇ ಹೋಗಿತ್ತು. ಆದ್ರೆ ಜಯ ಸಾವಿನ ರಹಸ್ಯ ಬಯಲು ಮಾಡೋಕೆ ಈಗ ಖುದ್ದು ಹೈ ಕೋರ್ಟೇ ಕೈ ಹಾಕಿದೆ.
ತಮಿಳುನಾಡಿದ ಪುರುಚ್ಚಿ ತಲೈವಿ ಸತ್ತು ಸಮಾಧಿಯಾಗಿ ಇವತ್ತಿಗೆ 25 ದಿನ. ಸಾಯೋದಕ್ಕು ಮುಂಚೆ ಜಯ ಮುಚ್ಚಿಟ್ಟ ಸತ್ಯ, ಸತ್ತಮೇಲೆ ಬಯಲಾಗದ ರಹಸ್ಯ ಇವೆರಡು ಇವತ್ತಿಗೂ ನಿಗೂಢವಾಗೇ ಉಳಿದಿದೆ. ಜಯ ಸತ್ತಿದ್ದಾರೆ ಅನ್ನೋದು ಬಿಟ್ರೆ ಸತ್ತಿದ್ದೇಕೆ, ಸಾಯಿಸಿದವರು ಯಾರು, ಸಾವು ತಾನಾಗೆ ಬಂತ ಇಲ್ಲ ಮತ್ಯಾರೋ ಕೊಲೆ ಮಾಡಿದ್ರ ಅನ್ನೋದು ಯಾರಿಗೂ ಗೊತ್ತಿಲ್ಲ. ಅದೆಲ್ಲಾ ಗೊತ್ತಾಗಲೇ ಬೇಕು ಅಂದ್ರೆ ಅದು ಜಯಲಿಲತಾ ಶವ ಸಮಾಧಿ ಬಿಟ್ಟು ಹೋರಗೆ ಬರಲೇ ಬೇಕು.
ಜಯಲಿಲತಾ ಸಾವಿನ ಬಗ್ಗೆ ಎಲ್ಲರು ಕೇಳಿದ್ದು ಅಂದೊದೇ ಪ್ರಶ್ನೆ. ಅಮ್ಮ ಸತ್ತಿದ್ದು ಹೇಗೆ ಅನ್ನೋದು. 25 ದಿನ ಕಳೆದ್ರು ಅದೊಂದು ಪ್ರಶ್ನೆಗೆ ಮಾತ್ರ ತಮಿಳು ನಾಡಿನ ಯಾವ ಮೂಲೆಯಿಂದಲೂ ಉತ್ತರ ಹೊರ ಬಂದೇ ಇಲ್ಲ. ಜನ ಕೇಳಿದ್ರು, ಜರ್ನಲಿಸ್ಟ್ ಕೇಳಿದ್ರು ಕೊನೆಗೆ ಜನ ನಾಯಕರು ಕೇಳಿದ್ರು ಕೂಡ ಜಯ ಸತ್ತಿದ್ದಾರೆ ಅನ್ನೋದೆ ಉತ್ತರವಾಯ್ತೇ ಹೊರತು ಸಾವಿನ ಕಾರಣ ಸತ್ತೇ ಹೋಗಿತ್ತು. ಆದ್ರೆ ಜಯ ಸಾವಿನ ರಹಸ್ಯ ಬಯಲು ಮಾಡೋಕೆ ಈಗ ಖುದ್ದು ಹೈ ಕೋರ್ಟೇ ಕೈ ಹಾಕಿದೆ.
ಜಯಲಲಿತಾ ಸಾವೇ ಒಂದು ಅನುಮಾನ ಅನ್ನೋದನ್ನ ಯಾವಾಗ ಕೋರ್ಟ್ ಹೇಳ್ತೋ ಅಲ್ಲಿಗೆ ಈ ಅನುಮಾನಕ್ಕೆ ಒಂದು ಪರಿಸಮಾಪ್ತಿ ಸಿಗೋ ಹಾಗೇ ಕಾಣ್ತಿದೆ. ಕಾರಣ ಜಯಲಲಿತಾ ಸಾವಿನ ಬಗ್ಗೆ ಈಗ ನಡೆಯಬೇಕಾಗಿರೋದು ತನಿಖೆಯಲ್ಲ ಮರಣೋತ್ತರ ಪರೀಕ್ಷೆ. ಅದು ಕೇವಲ ಮರಣೋತ್ತರ ಪರೀಕ್ಷೆ ಅಲ್ಲ ಹೂತಿಟ್ಟ ದೇಹದ ಮರು ಮರಣೋತ್ತರ ಪರೀಕ್ಷೆ.

ಮರಣೋತ್ತರ ಪರೀಕ್ಷೆ ನಡೆಯೋದು ಅನುಮಾನಕ್ಕೆ ತರೆಎಳೆಯೋಕೆ. ಆದ್ರೆ ಜಯಲಿತಾ ದೇಹದ ಮರು ಮರಣೋತ್ತರ ಪರೀಕ್ಷೆ ನಡೆಯೋದು ಕೊಲೆಗಾರ ಯಾರು ಅನ್ನೋದನ್ನ ಹುಡುಕೋದಕ್ಕೆ. ಅಷ್ಟಕ್ಕು ಮೆದ್ರಾಸ್ ಹೈ ಕೋರ್ಟ್ ನ್ಯಾಯಾಧೀಶರೇ ಇಂಥದೊಂದು ಅನುಮಾನ ವ್ಯಕ್ತಪಡಿಸಿದಾಗ ಮುಂದೇನಾಗುತ್ತೆ ಗೊತ್ತಾ…ನೀವು ಊಹೆ ಮಾಡೋದಕ್ಕು ಸಾಧ್ಯವಿಲ್ಲ.
ಜಯಲಲಿತಾ ದೇಹದ ರಿಪೋಸ್ಟ್ ಮಾರ್ಟಮ್, ಅಥವಾ ಮರು ಮರಣೋತ್ತರ ಶವಪರೀಕ್ಷೆ. ಅಬ್ಬಾ ಹಿಂಗಂದ್ರೆನೇ ಮೈ ಒಂದು ಸರಿ ನಡುಗಿ ಹೋಗುತ್ತೆ. ಹಾಗೊಂದು ವೇಳೆ ಮರು ಮರಣೋತ್ತರ ಪರೀಕ್ಷೆ ನಡೀತು ಅಂದ್ರೆ ಜಯಲಲಿತಾ ಹತ್ಯೆಯ ನಿಜವಾದ ಹಂತಕ ಯಾರು ಅನ್ನೋದಕ್ಕೆ ಮೊಟ್ಟ ಮೊದಲ ಸಾಕ್ಷಿನೂ ಸಿಗುತ್ತೆ ಹಾಗೂ ಸಾವಿನ ನಿಖರ ಕಾರಣಾನೂ ಸಿಗುತ್ತೆ.
ಜಯಲಲಿತಾ ಸತ್ತಿರಬಹುದು ಬಟ್ ಜಯಲಲಿತಾ ಸಾವಲ್ಲಿ ಹುಟ್ಟಿಕೊಂಡಿದ್ದ ಎಷ್ಟೋ ಪ್ರಶ್ನೆಗಳು ಅನುಮಾನಗಳು ಇನ್ನೂ ಜೀವಂತವಾಗಿದೆ. ಒಂದು ಪಕ್ಷ ಕೊಲೆ ಅನ್ನೋ ಅನುಮಾನಕ್ಕೆ ಕೋರ್ಟ್ ಒತ್ತುಕೊಟ್ಟು ಜಯಲಲಿತಾ ದೇಹವನ್ನು ರಿಪೋಸ್ಟ್ ಮಾರ್ಟಮ್ ಅಥವಾ ಮರು ಮರಣೋತ್ತರ ಶವಪರೀಕ್ಷೆ ನಡೆಸಿದ್ರೆ ಏನಾಗಬಹುದು.

Comments are closed.