ರಾಷ್ಟ್ರೀಯ

ಜಾರ್ಖಂಡ್ ನ ರಾಂಚಿ ಹತ್ತಿರದ ಲಾಲ್ ಮಾಟಿಯಾ ಕಲ್ಲಿದ್ದಲು ಗಣಿ ಕುಸಿತದ ದುರ್ಘಟನೆ: ಸಾವಿನ 7ಕ್ಕೆ ಏರಿಕೆ

Pinterest LinkedIn Tumblr

coalmine

ರಾಂಚಿ: ಜಾರ್ಖಂಡ್ ನ ರಾಂಚಿ ಹತ್ತಿರದ ಲಾಲ್ ಮಾಟಿಯಾ ಕಲ್ಲಿದ್ದಲು ಗಣಿ ಕುಸಿತದ ದುರ್ಘಟನೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರ್ಖಂಡ್ ಮುಖ್ಯಮಂತ್ರಿ ಜೊತೆ ಮಾತನಾಡಿ ಮಾಹಿತಿ ಪಡೆದುಕೊಂಡರು.

ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಅವರಿಗೆ ದೂರವಾಣಿ ಕರೆ ಮಾಡಿ ಕಲ್ಲಿದ್ದಲಿನಲ್ಲಿ ಮಣ್ಣು ಕುಸಿತದ ಕಾರಣ ಕೇಳಿ ತಿಳಿದುಕೊಂಡರು. ಈ ಮಧ್ಯೆ ಮುಖ್ಯಮಂತ್ರಿ ರಘುಬರ್ ದಾಸ್ ಮೃತಪಟ್ಟ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 25,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಗಣಿಯಲ್ಲಿ ಮಣ್ಣು ಕುಸಿತದಡಿ ಸಿಲುಕಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಪಾಟ್ನಾದಿಂದ ಮತ್ತೆ ಮೂರು ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ ತಂಡ ಲಾಲ್ ಮಾಟಿಯಾಗೆ ತಲುಪಿದೆ.

ಮಣ್ಣು ಕುಸಿತದಿಂದಾಗಿ ನಿನ್ನೆ ವಿದ್ಯುತ್ ಸಂಪರ್ಕ ಕಡಿದಿತ್ತು. ದಟ್ಟ ಮಂಜು ಕೂಡ ಮುಸುಕಿತ್ತು. ಹೀಗಾಗಿ ರಕ್ಷಣಾ ಕಾರ್ಯಕ್ಕೆ ನಿನ್ನೆ ರಾತ್ರಿ ಅಡ್ಡಿಯುಂಟಾಗಿತ್ತು.

Comments are closed.