ರಾಷ್ಟ್ರೀಯ

ಮಾರ್ಚ್ 31ರ ನಂತರವೂ ಹಳೆ ನೋಟು ಹೊಂದಿದ್ದವರಿಗೆ ಜೈಲು ಶಿಕ್ಷೆ ಇಲ್ಲ…ಕನಿಷ್ಠ 10 ಸಾವಿರ ರೂ. ದಂಡ

Pinterest LinkedIn Tumblr

note
ನವದೆಹಲಿ: ಮಾರ್ಚ್ 31ರ ನಂತರವೂ ಹಳೆಯ ನೋಟನ್ನು ಭಾರೀ ಸಂಖ್ಯೆ ಇಟ್ಟಿಕೊಂಡಿದ್ದರಿಗೆ ಅವರಿಗೆ ಕನಿಷ್ಠ 10 ಸಾವಿರ ರೂ. ದಂಡ ವಿಧಿಸಲು ಕೇಂದ್ರ ಸರ್ಕಾರ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ನೀಡಿದೆ.

ಹಳೆಯ ನೋಟುಗಳನ್ನು ಹೊಂದಿದ್ದವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಈ ಬಗ್ಗೆ ಇಂದು ಸರ್ಕಾರದ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, 4 ವರ್ಷ ಜೈಲು ಶಿಕ್ಷೆಯಿಲ್ಲ, ಕನಿಷ್ಠ 10 ಸಾವಿರ ರೂ. ದಂಡವನ್ನು ವಿಧಿಸಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.

ನ. 8ರಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ನಿಷೇಧಗೊಂಡ ಬಳಿಕ ಡಿ.30ರವರೆಗೆ ಬ್ಯಾಂಕಿನಲ್ಲಿ ಜಮೆ ಮಾಡಲು ಅವಕಾಶ ನೀಡಲಾಗಿದೆ. ಈ ಗಡುವು ಮುಗಿದ ಬಳಿಕವೂ ಹಳೆಯ ನೋಟನ್ನು ಮಾಚ್.31ರವರೆಗೆ ಆರ್‍ಬಿಐನಲ್ಲಿ ಜಮೆ ಮಾಡಲು ಅವಕಾಶ ನೀಡಲಾಗಿದೆ.

Comments are closed.