ರಾಷ್ಟ್ರೀಯ

ಮಸೀದಿ ಧ್ವಂಸ ವಿರೋಧ ಪ್ರಕರಣ: ತೆಲಂಗಾಣ ಕೋರ್ಟ್ ನಿಂದ ಒವೈಸಿ ಸಹೋದರರು ಖುಲಾಸೆ

Pinterest LinkedIn Tumblr

owasi
ಹೈದರಾಬಾದ್: ೧೧ ವರ್ಷಗಳ ಹಿಂದೆ ಮಸೀದಿಯೊಂದ ಧ್ವಂಸಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮತ್ತು ಅವರ ಸಹೋದರನನ್ನು ಒಳಗೊಂಡ ಅವರ ಪಕ್ಷದ ನಾಲ್ಕು ಜನ ಶಾಸಕರನ್ನು ಗುರುವಾರ ತೆಲಂಗಾಣ ಕೋರ್ಟ್ ಖುಲಾಸೆ ಮಾಡಿದೆ.
ಸಂಗಾರೆಡ್ಡಿ ಪಟ್ಟಣದ ಕೋರ್ಟ್, ಹೈದರಾಬಾದ್ ಸಂಸದ ಮತ್ತು ಅಖಿಲ ಭಾರತ ಮಜಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಲ್ವರು ಶಾಸಕರನ್ನು ಖುಲಾಸೆ ಮಾಡಿದೆ.
ಮುತ್ತಂಗಿ ಗ್ರಾಮದ ಬಳಿ ರಸ್ತೆ ವಿಸ್ತರಣೆಗಾಗಿ ಮಸೀದಿ ಒಡೆಯುವ ಸಂದರ್ಭದಲ್ಲಿ ಅದಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅಸಾದುದ್ದೀನ್ ಒವೈಸಿ, ಸಹೋದರ ಅಕ್ಬರುದ್ದೀನ್ ಒವೈಸಿ, ಅಹ್ಮದ್ ಪಾಶ ಖಾದ್ರಿ, ಮುಮ್ತಾಜ್ ಅಹ್ಮದ್ ಖಾನ್ ಮತ್ತು ಮುಅಜ್ಜಯಮ್ ಖಾನ್ ವಿರುದ್ಧ ಮಾರ್ಚ್ ೧೬, ೨೦೦೫ ರಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಸಾದುದ್ದೀನ್ ಒವೈಸಿ ಜನವರಿ ೨೧, ೨೦೧೩ ರಂದು ಕೋರ್ಟ್ ನಲ್ಲಿ ಶರಣಾಗತರಾಗಿದ್ದರು ಮತ್ತು ಅವರ ಜಾಮೀನುರಹಿತ ವಾರಂಟ್ ಅನ್ನು ರದ್ದು ಮಾಡಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಅವರನ್ನು ಜೈಲಿಗೆ ಕಳುಹಿಸಿತ್ತು.
ನಂತರ ಈ ಪ್ರಕರಣದಲ್ಲಿ ಎಐಎಂಐಎಂ ಅಧ್ಯಕ್ಷರಿಗೆ ಜಾಮೀನು ನೀಡಲಾಗಿತ್ತು.
ಈಗ ಗುರುವಾರದ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಒವೈಸಿ, ಆಂಧ್ರ ಹೋಳಾಗುವುದಕ್ಕೂ ಮುಂಚಿತವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಈಗ ಕ್ಷಮೆ ಕೊರಳು ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕಾನೂನು ಕ್ರಮವನ್ನು ಪಾಲಿಸದೆ ಮಸೀದಿಯನ್ನಿ ಧ್ವಂಸಗೊಳಿಸಲಾಗಿತ್ತು ಎಂದು ಕೂಡ ಅಸಾದುದ್ದೀನ್ ಟ್ವೀಟ್ ಮಾಡಿದ್ದಾರೆ.

Comments are closed.