ರಾಷ್ಟ್ರೀಯ

ನೋಟು ನಿಷೇಧಕ್ಕೆ 50 ದಿನದ ಹಿನ್ನೆಲೆಯಲ್ಲಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

Pinterest LinkedIn Tumblr

modi

ನವದೆಹಲಿ: ನೋಟು ನಿಷೇಧವಾಗಿ 50 ದಿನಗಳ ನಂತರ 2016 ನೇ ವರ್ಷ ಕಳೆದು ಹೋಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಶುಕ್ರವಾರ ಅಥವಾ ಶನಿವಾರದಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ. ಆದರೆ ಇನ್ನೂ ದಿನಾಂಕ ಯಾವುದು ಎಂದು ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ನೋಟು ನಿಷೇಧದ ನಂತರ ದೇಶದ ಆರ್ಥಿಕತೆಯಲ್ಲಿ ಉಂಟಾಗಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಪ್ರಧಾನಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ನವೆಂಬರ್ 8 ರಂದು ನೋಟು ನಿಷೇಧದ ನಂತರ ಆರ್ಥಿಕವಾಗಿ ಎದುರಾಗಿರುವ ಸಮಸ್ಯೆಗಳು, ಅವುಗಳನ್ನು ಹೋಗಲಾಡಿಸಲು ಸರ್ಕಾರ ಕೈಗೊಂಡ ವಿವಿಧ ಹಂತಗಳ ಬಗ್ಗೆಯೂ ಭಾಷಮ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲ ದಿನಗಳ ಹಿಂದೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರದಾನಿ ನರೇಂದ್ರ ಮೋದಿ, ಸರ್ಕಾರದ ನಿರ್ಧಾರ ಜನರಿಗೆ ಕೆಲಕಾಲ ನೋವನ್ನುಂಟು ಮಾಡಿದೆ, ಅದನ್ನು ಸ್ವಲ್ಪ ದಿನ ಸಹಿಸಿಕೊಳ್ಳಬೇಕು ಎಂದು ಹೇಳಿದ್ದರು.

ಮೊನ್ನೆ ಮಂಗಳವಾರ ನರೇಂದ್ರ ಮೋದಿ, ಆರ್ಥಿಕ ತಜ್ಞರು ಹಾಗೂ ನೀತಿ ಆಯೋಗದ ಸದಸ್ಯರೊಡನೆ ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

Comments are closed.