ರಾಷ್ಟ್ರೀಯ

ಶೇ.90ರಷ್ಟು ಹಳೆನೋಟುಗಳು ವಾಪಸ್: ಉಲ್ಟಾ ಆದ ಸರಕಾರದ ಲೆಕ್ಕಾಚಾರ!

Pinterest LinkedIn Tumblr

note-ban
ನವದೆಹಲಿ, ಡಿ. ೨೮ – ನವೆಂಬರ್ 8 ರಂದು ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯ ಮಾಡಿದಾಗ ಕನಿಷ್ಠಪಕ್ಷ 3 ಲಕ್ಷ ಕೋಟಿ ಕಾಳಧನ ಹೊರಗೆ ಬರಲಿದೆ ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು. ಆದರೆ, ಈಗ ಅದು ಸುಳ್ಳಾಗಿದೆ.

ನೋಟುಗಳನ್ನು ರದ್ದುಪಡಿಸಿದಾಗ 15.4 ಲಕ್ಷ ಕೋಟಿಗಳಷ್ಟು ಹಣ ಮಾನ್ಯತೆ ಕಳೆದುಕೊಂಡಿತು. ಆದರೆ, ಈಗ 14 ಲಕ್ಷ ಕೋಟಿ ರೂ.ಗಳಷ್ಟು ಹಣ ಬ್ಯಾಂಕ್‌ಗಳಿಗೆ ಹಿಂದಿರುಗಿದೆ!

ಕನಿಷ್ಠಪಕ್ಷ 3 ಲಕ್ಷ ಕೋಟಿ ರೂ.ಗಳಷ್ಟು ಹಣ ಹಿಂದಿರುಗುವುದಿಲ್ಲ ಎಂಬುದು ಹಣ ರದ್ಧತಿ ಹಿಂದಿನ ನಿರೀಕ್ಷೆಯಾಗಿತ್ತು. ಇದರೊಂದಿಗೆ ಸರ್ಕಾರ ತನಗೆ ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್)ನಿಂದ ಗಣನೀಯ ಪ್ರಮಾಣದಲ್ಲಿ ಲಾಭಾಂಶ (ಡಿವಿಡೆಂಟ್) ದೊರೆಯಲಿದೆ ಎಂಬ ನಿರೀಕ್ಷೆಯೂ ಸುಳ್ಳಾಗಿದೆ.

ಇದನ್ನು ಗಮನಿಸಿದರೆ ಅಕ್ರಮ ಹಣವನ್ನು ಮುಖ್ಯ ವಾಹಿನಿಗೆ ತರಲು ಖದೀಮರು ಬೇರೆ ಬೇರೆ ಹಾದಿಗಳನ್ನು ನೋಡಿಕೊಂಡಿದ್ದಾರೆ ಎಂಬುದು ಖಾತ್ರಿಯಾಗುತ್ತಿದೆ.

ಈಗ ಸರ್ಕಾರಕ್ಕಾಗಬಹುದಾದ ಲಾಭ ಎಂದರೆ ತಲಾ ಎರಡೂವರೆ ಲಕ್ಷ ಮೀರಿದ ಮೊತ್ತವನ್ನು ಠೇವಣಿ ಇಟ್ಟವರಿಂದ ತೆರಿಗೆ ವಸೂಲು ಮಾಡಬಹುದು.

ಇದು ಮಾತ್ರವಲ್ಲದೆ ಮನೆಯಲ್ಲೇ ಸಣ್ಣ ಉಳಿತಾಯ ಮಾಡಿ ಅದನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ತಂಡವರಿಂದಲೂ ಸರ್ಕಾರ ಲಾಭವನ್ನು ನಿರೀಕ್ಷಿಸಿದೆ.

ಸರ್ಕಾರ ವಿಧಿಸಿರುವ ಮಿತಿಗಿಂತ ಹೆಚ್ಚಿನ ಹಣ ಠೇವಣಿ ಇಟ್ಟರೆ ಅದಕ್ಕೆ ಶೇ. 50ರಷ್ಟು ತೆರಿಗೆ ವಿಧಿಸುವುದಲ್ಲದೆ, ಈ ಹಣದ ಶೇ. 25 ರಷ್ಟನ್ನು 4 ವರ್ಷಗಳ ಕಾಲ ಬಡವರ ಕಲ್ಯಾಣಕ್ಕಾಗಿ ನಿಧಿ ಸ್ಥಾಪನೆಗೆ ಬಳಸುವುದಾಗಿಯೂ ಸರ್ಕಾರ ಹೇಳಿದೆ.

Comments are closed.