ರಾಷ್ಟ್ರೀಯ

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯ ಸುಪ್ರೀಂ ಕೋರ್ಟಿನ ಮೂರ್ಖ ನಿರ್ಧಾರ: ಎಂಜಿಎಸ್ ನಾರಾಯಣ

Pinterest LinkedIn Tumblr

naryanan
ನವದೆಹಲಿ: ಟಾಕೀಸ್‍ನಲ್ಲಿ ಸಿನಿಮಾ ಆರಂಭವಾಗುವ ಮೊದಲು ರಾಷ್ಟ್ರಗೀತೆ ಕಡ್ಡಾಯ ಮಾಡಿರುವುದು ಸುಪ್ರೀಂಕೋರ್ಟ್‍ನ ಮೂರ್ಖತನ ನಿರ್ಧಾರ ಎಂದು ಇತಿಹಾಸಕಾರ ಎಂಜಿಎಸ್ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಜನರು ಮನರಂಜನೆಗಾಗಿ ಸಿನಿಮಾ ನೋಡಲು ಟಾಕೀಸ್‍ಗೆ ಬರ್ತಾರೆ. ಈ ವೇಳೆ ಅವರಲ್ಲಿ ಒತ್ತಾಯಪೂರ್ವಕವಾಗಿ ದೇಶಪ್ರೇಮ ಮೂಡಿಸುವ ಸುಪ್ರೀಂ ಕೋರ್ಟ್ ನಿರ್ಧಾರ ಸರಿಯಿಲ್ಲ. ಮಾತ್ರವಲ್ಲದೇ ಕೋರ್ಟ್ ನ ಈ ಆದೇಶ ಟಾಕೀಸ್‍ಗಳಲ್ಲಿ ಹೆಚ್ಚು ಕಾಲ ಯಶಸ್ವಿಯಾಗಲ್ಲ. ಶೀಘ್ರವೇ ಟಾಕೀಸ್‍ಗಳು ಈ ನಿಯಮವನ್ನು ಮುರಿಯತ್ತವೆ ಎಂಬುವುದಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತ ರಾಷ್ಟ್ರೀಯತೆಯ ದೇಶಕ್ಕಿಂತ ಹೆಚ್ಚು ನಾಗರಿಕರನ್ನು ಹೊಂದಿದ ದೇಶವಾಗಿದೆ. ಭಾರತವನ್ನು ರಾಷ್ಟ್ರೀಯತೆಗಳ ಒಕ್ಕೂಟವೆಂದೇ ಕರೆಯಬಹುದೇ ಹೊರತು ರಾಷ್ಟ್ರವೆಂದಲ್ಲ.ಯಾವತ್ತೂ ಭಾರತ ದೇಶವೆಂದು ನನಗನಿಸಿಲ್ಲ ಎಂದು ಅವರು ಹೇಳಿದ್ದಾರೆ.

ದೇಶಪ್ರೇಮ ಜನರ ಮನಸ್ಸಲ್ಲೇ ಮೂಡಬೇಕು. ಅದಲ್ಲದೇ ಈ ರೀತಿ ಟಾಕೀಸ್‍ನಲ್ಲಿ ಕಡ್ಡಾಯ ಮಾಡುವ ಮೂಲಕ ಒತ್ತಾಯಪೂರ್ವಕವಾಗಿ ದೇಶಪ್ರೇಮ ಹುಟ್ಟಿಸುವುದು ಸರಿಯಲ್ಲ. ಜನರಲ್ಲಿ ಒತ್ತಾಯವಾಗಿ ಯಾವತ್ತೂ ದೇಶಪ್ರೇಮವನ್ನು ಮೂಡಿಸಬಾರದು. ಅವರ ಮನಸ್ಸಿನಲ್ಲೇ ಇದು ನನ್ನ ದೇಶ, ನನ್ನ ದೇಶಕ್ಕೆ ನಾನು ಗೌರವ ಕೊಡಬೇಕು ಎಂದು ದೇಶದ ಪ್ರತಿಯೊಬ್ಬ ಪ್ರಜೆಯ ಅಂತರಾಳದಿಂದಲೇ ಚಿಗುರಬೇಕು. ಈ ಆದೇಶಕ್ಕೆ ಶೀಘ್ರವೇ ನಕರಾತ್ಮಕ ಉತ್ತರವನ್ನು ಜನ ನ್ಯಾಯಾಲಯಕ್ಕೆ ಒದಗಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾರಾಯಣ್ ಅವರು ಈ ಹಿಂದೆ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2001ರಿಂದ 2003ರವರೆಗೆ ಇತಿಹಾಸ ಸಂಶೋಧನೆಯ ಭಾರತೀಯ ಮಂಡಳಿ(ಐಸಿಎಚ್‍ಆರ್)ನ ಅಧ್ಯಕ್ಷರಾಗಿದ್ದರು.

Comments are closed.