ರಾಷ್ಟ್ರೀಯ

ಯೆಮನ್ ನಲ್ಲಿ ಅಪಹರಣಕ್ಕೊಳಗಾದ ಕೇರಳ ಮೂಲದ ಪಾದ್ರಿ ರಕ್ಷಣೆಗೆ ಭಾರತ ಸರ್ವ ಪ್ರಯತ್ನ: ಸುಷ್ಮಾ ಸ್ವರಾಜ್

Pinterest LinkedIn Tumblr

sushma

ನವದೆಹಲಿ: ಯೆಮನ್ ನಲ್ಲಿ ಅಪಹರಣಕ್ಕೀಡಾಗಿರುವ ಕೇರಳ ಮೂಲದ ಕ್ರೈಸ್ತ ಪಾದ್ರಿಯ ಬಿಡುಗಡೆಗೆ ಭಾರತ ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.

ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯ ಪ್ರವೇಶ ಮಾಡಿರುವ ಅವರು, ತನ್ನನ್ನು ಬಂಧಿಸಿರುವ ಬಗ್ಗೆ ಪಾದ್ರಿ ಫಾ.ಟೊಮ್ ಉಝ್ಹುನ್ನಲಿಲ್ ಭಾವನಾತ್ಮಕವಾಗಿ ಮಾತನಾಡಿರುವ ವಿಡಿಯೋ ಬಹಿರಂಗಗೊಂಡ ನಂತರ ಅದನ್ನು ವೀಕ್ಷಿಸಿದ ಸಚಿವೆ ಭರವಸೆ ನೀಡಿದ್ದಾರೆ.

”ನಾನು ಫಾದರ್ ಟೊಮ್ ಅವರ ವಿಡಿಯೋವನ್ನು ನೋಡಿದೆ. ಅವರೊಬ್ಬ ಭಾರತೀಯರಾಗಿದ್ದು, ಪ್ರತಿಯೊಬ್ಬ ಭಾರತೀಯರ ಜೀವ ನಮಗೆ ಮುಖ್ಯ. ಬಂಧನಕ್ಕೀಡಾಗಿರುವ ಫಾದರ್ ಟೊಮ್ ಬಿಡುಗಡೆಗೆ ನಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಯೆಮೆನ್ ನ ಅಡೆನ್ ನಿಂದ ಕಳೆದ ಮಾರ್ಚ್ ತಿಂಗಳಲ್ಲಿ ಅಪಹರಕ್ಕೀಡಾಗಿರುವ ಫಾದರ್ ಟೊಮ್ ಅವರ ಬಿಡುಗಡೆಗೆ ಭಾರತ ಸರ್ಕಾರ ಸೌದಿ ಅರೇಬಿಯಾ ಮತ್ತು ಯೆಮೆನ್ ನ ಸತತ ಸಂಪರ್ಕದಲ್ಲಿದೆ.

Comments are closed.