ರಾಷ್ಟ್ರೀಯ

ಶುಕ್ರವಾರ ಪ್ರಾರ್ಥನೆಗೆ ಮುಸ್ಲಿಮ್ ಉದ್ಯೋಗಿಗಳಿಗೆ 90 ನಿಮಿಷಗಳ ವಿರಾಮ

Pinterest LinkedIn Tumblr

muslimಡೆಹ್ರಾಡೂನ್ (ಡಿ.19): ಮುಸ್ಲಿಮ್ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷಗಳ ವಿರಾಮ ನೀಡುವ ತೀರ್ಮಾನ ಉತ್ತರಾಖಂಡ ಸರ್ಕಾರ ತೆಗೆದುಕೊಡಿದೆ.
ಭಾನುವಾರ ಮುಖ್ಯಮಂತ್ರಿ ಹರೀಶ್ ರಾವತ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಸ್ಲಿಮ್ ಉದ್ಯೋಗಿಗಳಿಗೆ ಶುಕ್ರವಾರ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ವಿರಾಮವಿರವುದು.
ಬಿಜೆಪಿ ವಿರೋಧ:
ಹರೀಶ್ ರಾವತ್ ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ರಾವತ್ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದಾರೆಂದು ಆರೋಪಿಸಿದೆ.
ಮುಸ್ಲಿಮರನ್ನು ದಾರಿತಪ್ಪಿಸುವ ಕಾಂಗ್ರೆಸ್’ನ ಹಳೆಯ ಸಂಪ್ರದಾಯವನ್ನು ಹರೀಶ್ ರಾವತ್ ಮುಂದುವರೆಸುತ್ತಿದ್ದಾರೆ. ಚುನಾವಣೆ ಮುಂಚೆ ಈ ಕ್ರಮ ಕೈಗೊಳ್ಳುವ ಹಿಂದೆ ಉದ್ದೇಶವೇನಿದೆ ಎಂದು ಬಿಜೆಪಿ ಮುಖಂಡ ಅನಿಲ್ ಬುಲಾನಿ ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷ, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದೆ.

Comments are closed.