ರಾಷ್ಟ್ರೀಯ

ಹೈದರಾಬಾದ್ ದಿಲ್ ಸುಖ್ ನಗರ ಸ್ಫೋಟ ಪ್ರಕರಣ: ಉಗ್ರ ಯಾಸಿನ್ ಭಟ್ಕಳ ಸೇರಿ ಐವರಿಗೆ ಗಲ್ಲು

Pinterest LinkedIn Tumblr

primetime0001

ಹೈದರಾಬಾದ್: 2013 ರ ಫೆಬ್ರವರಿ 21 ರಂದು ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದ 5 ಅಪರಾಧಿಗಳಿಗೆ ಹೈದರಾಬಾದ್ ನ ಎನ್ಐಎ ವಿಶೇಷ ನ್ಯಾಯಾಲಯ ಗಲ್ಲು(ಮರಣದಂಡನೆ) ಶಿಕ್ಷೆ ಪ್ರಕಟಿಸಿದೆ.

ದಿಲ್‌ಸುಖ್‌ನಗರದಲ್ಲಿ 2013 ರ ಫೆಬ್ರವರಿ 21 ರಂದು ನಡೆದಿದ್ದ ಅವಳಿ ಬಾಂಬ್‌ ಸ್ಫೋಟ ಪ್ರಕರಣದ 5 ಮಂದಿ ಆರೋಪಿಗಳನ್ನು ಅಪರಾಧಿಗಳೆಂದು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣವನ್ನು ಡಿ.19 ರಂದು ಪ್ರಕಟಿಸುವುದಾಗಿ ಘೋಷಿಸಿತ್ತು.

ಪ್ರಕರಣದ ಪ್ರಮುಖ ಆರೋಪಿಗಳಾದ ಯಾಸಿನ್‌ ಭಟ್ಕಳ್‌ ಸೇರಿದಂತೆ ಉತ್ತರ ಪ್ರದೇಶದ ಅಸಾದುಲ್ಲಾ ಅಖ್ತರ್, ಪಾಕಿಸ್ತಾನದ ಜಿಯಾ ಉರ್‌ ರೆಹಮಾನ್‌ ಅಲಿಯಸ್‌ ವಖಾಸ್‌ ,ಬಿಹಾರದ ತಾಹ್ ಸೇನ್ ಅಖ್ತರ್ ಅಲಿಯಾಸ್‌ ಮೋನು, ಮಹರಾಷ್ಟ್ರದ ಅಜೀಜ್ ಸಯೀದ್ ನನ್ನು ಎನ್‌ಐಎ ವಿಶೇಷ ನ್ಯಾಯಾಲಯ ಅಪರಾಧಿಗಳೆಂದು ಘೋಷಣೆ ಮಾಡಿತ್ತು.

ಎನ್‌ಐಎ ಡೈರೆಕ್ಟರ್‌ ಜನರಲ್‌ ಆಗಿರುವ ಶರದ್‌ ಕುಮಾರ್‌ ಪ್ರತಿಕ್ರಿಯೆ ನೀಡಿ ‘ಇದು ನಮ್ಮ ತಂಡದ ಅದ್ಭುತ ತನಿಖೆಯಾಗಿದ್ದು ಪ್ರಕರಣದಲ್ಲಿ ಪ್ರತಿ ಸಾಕ್ಷಿ ಸೂಕ್ಷ್ಮವಾದ ಪರೀಕ್ಷಿಸಲಾಗಿತ್ತು. ಇಂಡಿಯನ್‌ ಮುಜಾಯಿದ್ದೀನ್‌ ಉಗ್ರರಿಗೆ ಶಿಕ್ಷೆಯಾದ ಮೊದಲ ಪ್ರಕರಣ ಇದಾಗಿದೆ.ನಾವು ಅಪರಾಧಿ ಉಗ್ರರಿಗೆ ಗರಿಷ್ಠ ಶಿಕ್ಷೆ ನೀಡಲು ಮನವಿ ಮಾಡಿದ್ದೇವೆ’ ಎಂದರು.

ಪ್ರಕರಣದ ಸೂತ್ರಧಾರ ಉಗ್ರ ರಿಯಾಜ್‌ ಭಟ್ಕಳ್‌ ನಾಪತ್ತೆಯಾಗಿದ್ದು, ಆತ ಕರಾಚಿಯಿಂದ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ. 2013ರ ಫೆಬ್ರವರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 19 ಮಂದಿ ದಾರುಣವಾಗಿ ಸಾವನ್ನಪ್ಪಿ 131 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

Comments are closed.